ಬಂಟ್ವಾಳ : ತೌಹೀದ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬಂಟ್ವಾಳ, ಸೆ.6: ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕಿಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಆಡಳಿತ ಮಂಡಳಿಯಿಂದ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿ ವರ್ಗಕ್ಕೆ ಉಡುಗೊರೆ ನೀಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ಟ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರಚನಾ ಎನ್. ಸಹಿತ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಕಚೇರಿ ಸಿಬ್ಬಂದಿ ಬುಶ್ರಾ ಸ್ವಾಗತಿಸಿದರು. ಅಶ್ಫಾಕ್ ವಂದಿಸಿದರು. ನೌಶೀನ ಕಾರ್ಯಕ್ರಮ ನಿರೂಪಿಸಿದರು.

Next Story





