ಹಸಿ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿಯ ಹಸಿ ಮೀನಿನ ಅಂಗಡಿಗೆ ಬೆಂಕಿ ಇಟ್ಟ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯ ಉಪ್ಪಿನಂಗಡಿ ಘಟಕದ ನೇತತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಹಿಂದೂ ಜಾಗರಣಾ ವೇದಿಕೆಯ ಮಾತ ಸುರಕ್ಷಾ ಸಂಯೋಜಕ್ ಬ.ಗಣರಾಜ್ ಭಟ್ ಕೆದಿಲ ಮಾತನಾಡಿ, ಇಲ್ಲಿನ ಹಳೆಗೇಟಿನ ಬಳಿ ಹಿಂದೂ ಯುವಕನೊಬ್ಬನ ಮೀನಿನ ಅಂಗಡಿಗೆ ಆ.22ರಂದು ಮಧ್ಯರಾತ್ರಿಯ ಬಳಿಕ ಬೆಂಕಿ ಹಚ್ಚಿ, ಅಂಗಡಿ ನಾಶಕ್ಕೆ ಕಾರಣವಾದ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ಆರೋಪಿಗಳನ್ನು ಬಂಧಿಸಿ ಎಂದು ಪೊಲೀಸ್ ಇಲಾಖೆಯ ಮುಂದೆ ನಮಗೆ ಭಿಕ್ಷೆ ಬೇಡುವ, ಅಂಗಲಾಚುವ ಸ್ಥಿತಿ ಬಂದೊದಗಿರುವುದು ವಿಪರ್ಯಾಸ. ಆ ಪ್ರಕರಣದ ಬಗ್ಗೆ ಸಾಕ್ಷ್ಯ ಲಭಿಸಿಲ್ಲ. ಸಿಸಿ ಫೂಟೇಜ್ ಇಲ್ಲ ಎನ್ನುವ ನೆಪ ಹೇಳುವ ಪೊಲೀಸ್ ಅಕಾರಿಗಳು ಅದೇ ಸ್ಥಳದಲ್ಲಿ ಕೊಲೆ, ಅತ್ಯಾಚಾರದಂತಹ ಘಟನೆಗಳು ನಡೆದಿದ್ದರೆ ಇದೇ ರೀತಿ ಹೇಳಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬಿಸುತ್ತಿದ್ದರೇ ? ಎಂದು ಪ್ರಶ್ನಿಸಿದರು.
ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಚಾಲಕ ಮುರಳೀಕಷ್ಣ ಹಸಂತಡ್ಕ ಹಾಗು ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಘ ಪರಿವಾರ ಸಂಘಟನೆಗಳ ಮುಖಂಡರಾದ ಮುಖಂಡ ಭಾಸ್ಕರ ಧರ್ಮಸ್ಥಳ, ಚಿನ್ಮಯಿ ಈಶ್ವರಮಂಗಳ, ರಾಜೇಶ್ ಪಂಚೋಡಿ, ಅಜಿತ್ ಹೊಸಮನೆಸಂದೀಪ್ ಕುಪ್ಪೆಟ್ಟಿ ಹಾಗು ಇತರರು ಇದ್ದರು.





