ಪ್ರೊ. ಹೊಸ್ಸಾಮ್ ಹಮ್ದಿಗೆ ಎಎಂಇಇ ಹೊನೊರರಿ ಪ್ರಶಸ್ತಿ
![ಪ್ರೊ. ಹೊಸ್ಸಾಮ್ ಹಮ್ದಿಗೆ ಎಎಂಇಇ ಹೊನೊರರಿ ಪ್ರಶಸ್ತಿ ಪ್ರೊ. ಹೊಸ್ಸಾಮ್ ಹಮ್ದಿಗೆ ಎಎಂಇಇ ಹೊನೊರರಿ ಪ್ರಶಸ್ತಿ](https://www.varthabharati.in/sites/default/files/images/articles/2021/09/7/305606-1630953713.jpg)
ಪ್ರೊ. ಹೊಸ್ಸಾಮ್ ಹಮ್ದಿ
ಮಂಗಳೂರು, ಸೆ. 6: ಗಲ್ಭ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಅವರು ಯುರೋಪ್ನ ವೈದ್ಯಕೀಯ ಶಿಕ್ಷಣದ ಅಂತಾರಾಷ್ಟ್ರೀಯ ಸಂಘವಾಗಿರುವ ಎಎಂಇಇ ಹೊನೊರರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಹೊಸ್ಸಮ್ ಹಮ್ದಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.
ಯುಎಇ ಹಾಗೂ ಜಗತ್ತಿನಾದ್ಯಂತ ಸೇವೆ ನೀಡಲು ಬಯಸುವ ಭವಿಷ್ಯದ ಆರೋಗ್ಯ ವೃತ್ತಿಪರರನ್ನು ನಾವು ರೂಪಿಸುತ್ತಿದ್ದೇವೆ. ವೈದ್ಯಕೀಯ ಶಿಕ್ಷಣದ ಅಭಿವೃದ್ಧಿಗೆ ನನ್ನ ಕೊಡುಗೆಯನ್ನು ಗುರುತಿಸಿರುವುದು ವೈಯುಕ್ತಿಕವಾಗಿ ಸಂತೋಷ ತಂದಿದೆ. ಇದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಇತರ ಸಹೋದ್ಯೋಗಿಗಳಿಗೆ ಇನ್ನಷ್ಟು ಸಾಧಿಸಲು ಪ್ರೇರಣೆ ನೀಡಲಿದೆ ಎಂದು ಪ್ರೊ. ಹೊಸ್ಸಮ್ ಹಮ್ದಿ ಪ್ರತಿಕ್ರಿಯಿಸಿದ್ದಾರೆ.
ಭವಿಷ್ಯದ ಆರೋಗ್ಯ ಸೇವೆಯ ವೃತ್ತಿಗೆ ಸಾಕಷ್ಟು ಅವಕಾಶಗಳಿವೆ. ಆರೋಗ್ಯ ಸೇವೆಯ ವ್ಯವಸ್ಥೆ ವೇಗವಾಗಿ ಬದಲಾಗುತ್ತಿದೆ. ವೈದ್ಯಕೀಯ ಕ್ಷೇತ್ರವನ್ನು ಆಧುನಿಕ ತಂತ್ರಜ್ಞಾನ ಆವರಿಸಿಕೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಆರೋಗ್ಯ ಸೇವೆ ಅಭ್ಯಾಸದ ಹೊಸ ಜಗತ್ತಿನಲ್ಲಿ ಕೆಲಸ ಮಾಡಲು ಆರೋಗ್ಯ ವೃತ್ತಿಪರರು ತರಬೇತು ಪಡೆಯಬೇಕು ಎಂದು ಹೊಸ್ಸಾಮ್ ಹಮ್ದಿ ತಿಳಿಸಿದ್ದಾರೆ.