ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ, ಸೆ.7: ಭಾರತ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖೆ ವತಿ ಯಿಂದ ಬೀಡಿ, ಗಣಿ ಹಾಗೂ ಸಿನಿಮಾ ಕಾರ್ಮಿಕರ ಮಕ್ಕಳಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕ್ರಮವಾಗಿ ನವೆಂಬರ್ 15 ಮತ್ತು 30 ಕೊನೆಯ ದಿನ. ಶಾಲಾ ಮುಖ್ಯಸ್ಥರು ಅರ್ಜಿಯನ್ನು ಪರಿಶೀಲಿಸಿ ಶಿಫಾರಸ್ಸು ಮಾಡಲು ಡಿ.15 ಮತ್ತು ನೋಡೆಲ್ ಅಧಿಕಾರಿಗಳಿಂದ ಪರಿಶೀಲನೆ ಮಾಡಲು ಡಿ.31 ಕೊನೆಯ ದಿನವಾಗಿದೆ.
ಎನ್‌ಎಸ್‌ಪಿ-https://scholarship.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಯಾವುದೇ ವಿವರಣೆ ಬೇಕಾಗಿದ್ದಲ್ಲಿ-helpdesk@nsp.gov.in ಅಥವಾ 0120-6619540ವನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-23471406/080-2347491 ಮತ್ತು -wclwoblr-ka@nic.inನ್ನು ಸಂಪರ್ಕಿಸುವಂತೆ ಕಾರ್ಮಿಕ ಕಲ್ಯಾಣ ಆಯುಕ್ತರ ಪ್ರಕಟಣೆ ತಿಳಿಸಿದೆ.
Next Story





