ಭದ್ರಾವತಿ: ಸಾಲಕ್ಕೆ ಹೆದರಿಗೆ ತಾಯಿ, ಮಗಳು ಆತ್ಮಹತ್ಯೆ
ಶಿವಮೊಗ್ಗ(ಸೆ.7): ಸಾಲಕ್ಕೆ ಹೆದರಿ ತಾಯಿ ಮತ್ತು ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ ನಡೆದಿದೆ.
ಯಾಕ್ಸಿನ್ ನಗರದ ಸಂಗೀತಾ(35) ಹಾಗೂ ಮಧುಶ್ರೀ(11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯು ಮಗಳಿಗೆ ಮೊದಲು ಸೀರೆಯಿಂದ ನೇಣು ಬಿಗಿದಿದ್ದು, ನಂತರ ಅದೇ ಸೀರೆಗೆ ಅವಳು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಗೀತಾ ಪತಿ ಧನಶೇಖರ್ ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೋವಿಡ್ ಬಳಿಕ ಧನಶೇಖರ್ ವ್ಯವಹಾರದಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಕಷ್ಟು ಸಾಲವನ್ನೂ ಮಾಡಿದ್ದರು. ಪತಿ ಸಾಲ ಮಾಡಿದ ವಿಷಯ ತಿಳಿದಿದ್ದ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ತಿಳಿದುಬಂದಿದೆ.
ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





