ವಿಯೆಟ್ನಾಮ್: ಕೋವಿಡ್ ಹರಡಿದ ಅಪರಾಧಕ್ಕೆ 5 ವರ್ಷ ಜೈಲುಶಿಕ್ಷೆ !

ಹನೋಯ್, ಸೆ.7: ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿ ಇರಬೇಕೆಂಬ ನಿಯಮವನ್ನು ಉಲ್ಲಂಘಿಸಿ ಕೋವಿಡ್ ಸೋಂಕು ಹರಡಿದ ಅಪರಾಧಕ್ಕಾಗಿ ವಿಯೆಟ್ನಾಮ್ನ ವ್ಯಕ್ತಿಯೊಬ್ಬರಿಗೆ 5 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಯೆಟ್ನಾಮ್ನ ಕೊರೋನ ಹಾಟ್ಸ್ಪಾಟ್ ಎನಿಸಿರುವ ಹೊ ಚಿನ್ಮಿನ್ ನಗರದಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲೆ ವಾನ್ ಟ್ರಿ ಎಂಬ ವ್ಯಕ್ತಿಯಲ್ಲಿ ಕೊರೋನ ದೃಢಪಟ್ಟ ಬಳಿಕ ಜುಲೈ 7ರಿಂದ 21 ದಿನ ಮನೆಯಲ್ಲೇ ಕ್ವಾರಂಟೈನ್ಗೆ ಸೂಚಿಸಲಾಗಿತ್ತು. ಆದರೆ ಆತ ಇದನ್ನು ಉಲ್ಲಂಸಿ ಕಾ ಮಾವ್ ಎಂಬಲ್ಲಿನ ತನ್ನ ಮನೆಗೆ ತೆರಳಿದ್ದ. ಈತನಿಂದ 8 ಮಂದಿಗೆ ಸೋಂಕು ಹರಡಿದ್ದು ಇದರಲ್ಲಿ ಒಬ್ಬ ರೋಗಿ ಮೃತನಾಗಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಲೆ ವಾನ್ ಟ್ರಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.
Next Story





