ಎಸೆಸ್ಸೆಫ್ ಪ್ರತಿಭೋತ್ಸವ ಮಾಹಿತಿ ಕಾರ್ಯಾಗಾರ

ಮಂಗಳೂರು, ಸೆ.7: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇ ಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಱಪ್ರತಿಭಾ ಅನ್ವೇಷಣೆಱ ಪ್ರತಿಭೋತ್ಸವದ ಮಾಹಿತಿ ಕಾರ್ಯಾಗಾರವು ಮಂಗಳವಾರ ನಗರದ ಸುನ್ನೀ ಜಂಇಯ್ಯತುಲ್ ಉಲಮಾ ಕಚೇರಿಯಲ್ಲಿ ನಡೆಯಿತು.
ಎಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು. ಎಸೆಸ್ಸೆ ಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಕಾರ್ಯಾಗಾರ ಉದ್ಘಾಟಿಸಿದರು.
ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಕೆಎಂ ಮುಸ್ತಫಾ ನಈಮಿ ಹಾವೇರಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು, ರಾಜ್ಯ ನಾಯಕರಾದ ಮುನೀರ್ ಸಖಾಫಿ ಉಳ್ಳಾಲ, ಅಝೀಝ್ ಸಖಾಫಿ ಕೊಡಗು ಉಪಸ್ಥಿತರಿದ್ದರು.
ರಾಜ್ಯ ಪ್ರತಿಭೋತ್ಸವ ಸಮಿತಿಯ ಸಂಚಾಲಕ ವಾಜಿದ್ ಹಾಸನ ಸ್ವಾಗತಿಸಿ,ವಂದಿಸಿದರು.
Next Story





