Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾನವ ಸಂಬಂಧಗಳನ್ನು ಗೌರವಿಸಲು...

ಮಾನವ ಸಂಬಂಧಗಳನ್ನು ಗೌರವಿಸಲು ಪ್ರೇರೇಪಿಸುವ ಮೊಂತಿ ಹಬ್ಬ: ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ವಾರ್ತಾಭಾರತಿವಾರ್ತಾಭಾರತಿ7 Sept 2021 11:02 PM IST
share

ಮಂಗಳೂರು, ಸೆ.7: ಬುಧವಾರ ಆಚರಿಸುವ ಮೊಂತಿ ಹಬ್ಬವು ಕರ್ನಾಟಕ ಕರಾವಳಿಯ ಕ್ರೈಸ್ತರಿಗೆ, ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಮಹತ್ವದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ಟ್’ ಅಂತ ಕರೆಯುತ್ತೇವೆ. ಕೊಂಕಣಿ ಸಂಸ್ಕತಿಯು ಇದರಲ್ಲಿ ಅಡಕವಾಗಿದೆ. ಈ ಹಬ್ಬದ ವಿಶೇಷತೆ ಹೊಸತನದಿಂದ ಕೂಡಿರುವುದಾಗಿದೆ. ಮಾತೆ ಮರಿಯಮ್ಮನವರ ಜನ್ಮದಿನ ಶುಭಾಶಯಗಳು ಎಂದು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮೊಂತಿ ಹಬ್ಬದ ಸಂದೇಶ ನೀಡಿದ್ದಾರೆ.

ಇದು ಕುಟುಂಬದ ಹಬ್ಬ ಇದಾಗಿದ್ದು, ಹೆಣ್ಣುಮಗುವಿಗೆ ವಿಶೇಷ ಗೌರವವನ್ನು ಕೊಡಲು ಪ್ರೇರೇಪಿಸುವಂತಹದ್ದಾಗಿದೆ. ಇದರ ಜೊತೆಗೆ ಹೊಸತೆನೆಯನ್ನು ತಂದು ಆಶೀರ್ವದಿಸಿ ವಿವಿಧ ಬಗೆಯ ತರಕಾರಿಯನ್ನು ಆಸ್ವಾದಿಸಿ ಸಂತೋಷ ಪಡುತ್ತೇವೆ. ಚಿಕ್ಕ ಮಕ್ಕಳ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಹಬ್ಬ ಇದಾಗಿದೆ. ಕಾರಣ ಈ ಹಬ್ಬದ ಸಿದ್ಧತೆಯ ದಿನಗಳಲ್ಲಿ ಮಕ್ಕಳು ತಾವೇ ತೋಟ ಹಿತ್ತಲು ಸುತ್ತಿ ಹೂವುಗಳನ್ನು ಆರಿಸಿ ತಂದು ಕಂದ ಮರಿಯಳಿಗೆ ಆರ್ಪಿಸುತ್ತಾರೆ ಎಂದು ಹೇಳಿದರು.

ಪ್ರಕೃತಿಯ ರಕ್ಷಣೆ, ಹೆಣ್ಣುಮಗುವಿಗೆ ಗೌರವ, ಕುಟುಂಬದ ಏಕತೆ, ಭೂಮಿಯ ಫಲವತ್ತತೆ ಎಲ್ಲವನ್ನು ಸಾರುವ ಮರಿಯ ಜಯಂತಿಯು ನಮಗೆಲ್ಲರಿಗೂ ಸಂತೋಷದ ಕಾರಣವಾಗಲಿ ಎಂದು ಬಿಷಪರು ಆಶಿಸಿದರು.

ಇತ್ತೀಚೆಗೆ ಸ್ತ್ರೀಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಾನವ ಕಳ್ಳ ಸಾಗಾಟ ಹಾಗೂ ಹೆಣ್ಣನ್ನು ಭೋಗದ ವಸ್ತುವಿನಂತೆ ಕಾಣುವ ಮನುಜರಿಗೆ ನಾವು ಆಚರಿಸುವ ಹಬ್ಬ ಅವರ ಕಣ್ಣು ತೆರೆದು ಹೆಣ್ಣಿನ ಸ್ಥಾನ ಮಾನ ಅರಿತು ಅವರನ್ನು ಗೌರವಿಸುವ ಹಾಗೆ ಪ್ರೇರಣೆ ನೀಡಲಿ. ಆಗ ನಾವು ಆಚರಿಸುವ ಹಬ್ಬಕ್ಕೊಂದು ಸಾರ್ಥಕತೆ ಬರುವುದು. ಇಂತಹ ಸಾರ್ಥಕ ಜೀವನ ನಮ್ಮದಾಗಲಿ ಎಂದು ಆಶಿಸುತ್ತೇವೆ. ಜಗತ್ತಿನಾದ್ಯಂತ ಕೆಥೊಲಿಕ್ ಧರ್ಮಸಭೆಯಲ್ಲಿ ಇವರು ಆಮೊರಿಸ್ ಲೆತ್ತಿಶಿಯಾ ಕುಟುಂಬದವರು ಎಂದು ಆಚರಿಸುವ ಸುಸಂದರ್ಭದಲ್ಲಿ ಈ ಹಬ್ಬವು ನಮ್ಮ ಕುಟುಂಬ ಸಂಬಂಧಗಳನ್ನು ಬಲಿಷ್ಠಗೊಳಿಸಲು, ಒಗ್ಗಟ್ಟಿನಿಂದ, ಆನ್ಯೋನ್ಯತೆಯಿಂದ ಬಾಳಲು, ಸಂತೋಷದಿಂದ ಕೌಟುಂಬಿಕ ಜೀವನ ನಿರ್ವಹಣೆಗೆ ಮಾತೆ ಮರಿಯಳು ನಮಗಾಗಿ ಪ್ರಾರ್ಥಿಸಲಿ. ನಾಡಿನ ಸಮಸ್ತ ಜನರಿಗೆ ಮೋತಿ ಹಬ್ಬದ ಶುಭಾಶಯಗಳು. ದೇವರು ನಮ್ಮೆಲ್ಲರನ್ನು ಹರಸಲಿ ಎಂದು ತಿಳಿಸಿದ್ದಾರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X