ಅಫ್ಘಾನ್ ನಲ್ಲಿ ಕೆಲವೇ ಮಂದಿ ಅಮೆರಿಕನ್ನರು ಉಳಿದಿದ್ದಾರೆ: ಬ್ಲಿಂಕೆನ್
ದುಬೈ, ಸೆ.7: ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿರುವ ಅಮೆರಿಕನ್ನರು ಅಫ್ಗಾನ್ನಿಂದ ನಿರ್ಗಮಿಸಲು ಬಯಸುತ್ತಿರುವುದನ್ನು ಗಮನಿಸಿದ್ದೇವೆ ಎಂದು ವಿದೇಶ ವ್ಯವಹಾರ ಸಚಿವ ಆ್ಯಂಟನಿ ಬ್ಲಿಂಕೆನ್ ಮಂಗಳವಾರ ಹೇಳಿದ್ದಾರೆ.
ದೋಹಾದಲ್ಲಿ ಖತರ್ ವಿದೇಶ ಸಚಿವರೊಂದಿಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬ್ಲಿಂಕೆನ್, ದೇಶ ಬಿಟ್ಟು ತೆರಳಲು ಬಯಸುವ ಹಲವು ಅಫ್ಘಾನ್ನರ ಬಳಿ ಸೂಕ್ತ ದಾಖಲೆಪತ್ರ ಇಲ್ಲದಿರುವುದು ತೆರವು ಕಾರ್ಯಾಚರಣೆಗೆ ಎದುರಾಗಿರುವ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.
Next Story





