ಬಂಟ್ವಾಳ: ಕೋವಿಡ್ ಜನಜಾಗೃತಿ, ಲಸಿಕೆ ಕಾರ್ಯಕ್ರಮ

ಬಂಟ್ವಾಳ, ಸೆ.8: ನೆಹರೂ ಯುವ ಕೇಂದ್ರ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಗರ ಆರೋಗ್ಯ ಕೇಂದ್ರ ಬಂಟ್ವಾಳ, ಸ್ನೇಹಾಂಜಲಿ ಸೇವಾ ಸಂಫ(ರಿ) ಅಜ್ಜಿಬೆಟ್ಟು ಬಿ.ಸಿ.ರೋಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ಜನಜಾಗೃತಿ ಕಾರ್ಯಕ್ರಮ ಹಾಗೂ ಲಸಿಕೆ ವಿತರಣೆ ಕಾರ್ಯಕ್ರಮ ಬುಧವಾರ ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲೆಯಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ನಗರ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿಗಳಾದ ಅಶ್ವಿನಿ, ಅಕ್ಷತಾ ಹಾಗೂ ಸಿಬ್ಬಂದಿ ಮತ್ತು ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಯುವ ಸಮನ್ವಯಧಿಕಾರಿ ರಘವೀರ್ ಸೂಟರ್ ಪೇಟೆ, ತಾಲೂಕು ಯುವ ಸಂಯೋಜಕ ಆಶಿಶ್ ಅಜ್ಜಿಬೆಟ್ಟು ಹಾಗೂ ಸ್ನೇಹಾಂಜಲಿ ಸೇವಾ ಸಂಘದ ಪ್ರಮುಖರಾದ ಸದಾನಂದ ರಂಗೋಲಿ, ರಾಜೇಶ್, ನಾಗೇಶ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ಜಯಂತ್ ಅಗ್ರಬೈಲ್, ಕೇಶವ ದೈಪಲ, ಪ್ರದೀಪ್ ಅಜ್ಜಿಬೆಟ್ಟು, ಪ್ರಣಮ್ ಅಜ್ಜಿಬೆಟ್ಟು, ಪ್ರಶಾಂತ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.






