ಐದನೇ ಟೆಸ್ಟ್ ನಡೆಯುವ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಪ್ರತಿಕ್ರಿಯೆ ಏನು ಗೊತ್ತಾ?
ಸಹಾಯಕ ಸಿಬ್ಬಂದಿಗೆ ಕೊರೋನ
ಮ್ಯಾಂಚೆಸ್ಟರ್/ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಜೂನಿಯರ್ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೆ ಕೋವಿಡ್ -19 ಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಶುಕ್ರವಾರದಿಂದ ನಿಗದಿಯಾಗಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಮುಂದುವರಿಯುತ್ತದೆಯೋ,ಇಲ್ಲವೋ ಎಂಬ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿಗೆ ಖಚಿತತೆ ಇಲ್ಲವಾಗಿದೆ.
ಮುಖ್ಯ ಕೋಚ್ ರವಿ ಶಾಸ್ತ್ರಿ ಹಾಗೂ ಬೌಲಿಂಗ್ ತರಬೇತುದಾರ ಭರತ್ ಅರುಣ್ ನಂತರ, ಸಹಾಯಕ ಸಿಬ್ಬಂದಿಯ ಇನ್ನೊಬ್ಬ ಸದಸ್ಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಗುರುವಾರ ತಂಡದ ಪ್ರಾಕ್ಟೀಸ್ ಅನ್ನು ರದ್ದುಗೊಳಿಸಲಾಗಿತ್ತು.
"ಈ ಸಮಯದಲ್ಲಿ ಪಂದ್ಯ ನಡೆಯುತ್ತದೆಯೇ ಎಂದು ನಮಗೆ ತಿಳಿದಿಲ್ಲ. ನಾವು ಪಂದ್ಯವನ್ನು ಆಡಬಹುದೆಂಬ ಆಶಾವಾದವಿದೆ" ಎಂದು ಕೋಲ್ಕತ್ತಾದಲ್ಲಿ ನಡೆದ 'ಮಿಷನ್ ಡೊಮಿನೇಷನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಂಗುಲಿ ಹೇಳಿದರು.
ಓವಲ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಾಗ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮಾತ್ರ ಟೀಮ್ ನೊಂದಿಗಿದ್ದರು.
Next Story