ಮೊರಾದಾಬಾದ್ : ಕುಸ್ತಿ ವೇಳೆ ಪೈಲ್ವಾನ್ ಸಾವು

photo: indiatoday.in
ಲಕ್ನೊ: ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಕುಸ್ತಿ ಹೋರಾಟದಲ್ಲಿ ಕುಸ್ತಿಪಟುವೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುಸ್ತಿ ವೇಳೆ ಓರ್ವ ಕುಸ್ತಿಪಟು ತನ್ನ ಎದುರಾಳಿಯ ಕುತ್ತಿಗೆಯನ್ನು ಮುರಿಯುತ್ತಿರುವುದು ಕಂಡುಬಂದಿದೆ.
ಈ ಘಟನೆ ಸೆಪ್ಟೆಂಬರ್ 2 ರಂದು ಮೊರಾದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಠಾಕೂರ್ ದ್ವಾರ ಕೊತ್ವಾಲಿ ಪ್ರದೇಶದ ಫದ್ ಪುರ್ ಗ್ರಾಮದಲ್ಲಿ ನಡೆದ ಸ್ಪರ್ದೆಯ ವೇಳೆ ನಡೆಯಿತು.
ವಿಡಿಯೋದಲ್ಲಿ ಉತ್ತರಾಖಂಡದ ಕಾಶಿಪುರದ ಕುಸ್ತಿಪಟು ಮಹೇಶ್, ಸ್ಥಳೀಯ ಕುಸ್ತಿಪಟು ಸಾಜಿದ್ ವಿರುದ್ಧ ಹೋರಾಡುತ್ತಿರುವುದು ಕಂಡುಬಂದಿದೆ. ಪಂದ್ಯ ಆರಂಭವಾಗುತ್ತಿದ್ದಂತೆ ಸಾಜಿದ್ ಅವರು ಮಹೇಶನನ್ನು ಎತ್ತಿಕೊಂಡು ನೆಲದ ಮೇಲೆ ಕೆಡವಿ ಆತನ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದಾರೆ. ಮಹೇಶ್ ಮೂರ್ಛೆ ಹೋದಾಗ ನೆರೆದಿದ್ದ ಜನರು ಚೀರಾಟ ಮತ್ತು ಚಪ್ಪಾಳೆ ತಟ್ಟಿರುವುದು ಕಂಡುಬಂದಿತು.
ಇದಾದ ನಂತರ, ಮಹೇಶ್ ನೆಲದ ಮೇಲೆ ಪ್ರಜ್ಞಾಹೀನನಾಗಿರುವುದರಿಂದ ಸಾಜಿದ್ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಈವೆಂಟ್ನಲ್ಲಿ ನೆರೆದ ಕೆಲವು ಜನರು ಮಹೇಶನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ, ಮಹೇಶ ಅಲುಗಾಡಲೇ ಇಲ್ಲ. ನಂತರ ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಲಾಯಿತು.
ಮಹೇಶನ ಮೃತದೇಹವನ್ನು ಆತನ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.