ದ.ಕ. ಜಿಲ್ಲೆ : 176 ಮಂದಿಗೆ ಕೊರೋನ ಸೋಂಕು
ಗುರುವಾರ ಶೂನ್ಯ ಸಾವು ಪ್ರಕರಣ
![ದ.ಕ. ಜಿಲ್ಲೆ : 176 ಮಂದಿಗೆ ಕೊರೋನ ಸೋಂಕು ದ.ಕ. ಜಿಲ್ಲೆ : 176 ಮಂದಿಗೆ ಕೊರೋನ ಸೋಂಕು](https://www.varthabharati.in/sites/default/files/images/articles/2021/09/9/305951-1631206836.jpg)
ಮಂಗಳೂರು : ದ.ಕ. ಜಿಲ್ಲೆಯಲ್ಲಿ 176 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಗುರುವಾರ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿ 225 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.1.54ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿನ 1,11,919 ಸೋಂಕಿತರ ಪೈಕಿ 1,08,233 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1604 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 2082 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story