ಅಕ್ಟೋಬರ್ 1ರಿಂದ ಒಬಿಸಿ, ಯುಬಿಐ ಚೆಕ್ ಪುಸ್ತಕ ರದ್ದು
ಹೊಸದಿಲ್ಲಿ, ಸೆ. 9 : ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ)ದ ಚೆಕ್ ಪುಸ್ತಕವನ್ನು 2021 ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ.
ಒಬಿಸಿ ಹಾಗೂ ಯುಬಿಐ ಚೆಕ್ ಪುಸ್ತಕ ಹೊಂದಿರುವ ಎಲ್ಲ ಗ್ರಾಹಕರು ಹಳೆಯ ಚೆಕ್ ಪುಸ್ತಕದ ಬದಲು ಹೊಸ ಚೆಕ್ ಪುಸ್ತಕ ಪಡೆದುಕೊಳ್ಳುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಒಬಿಸಿ ಹಾಗೂ ಯುಬಿಐ ಎರಡೂ ಬ್ಯಾಂಕ್‌ಗಳು 2020 ಎಪ್ರಿಲ್‌ನಲ್ಲಿ ಪಿಎನ್‌ಬಿಯೊಂದಿಗೆ ವಿಲೀನಗೊಂಡಿತ್ತು.
ಆದರೆ, ಗ್ರಾಹಕರು ಈ ಎರಡೂ ಬ್ಯಾಂಕ್‌ಗಳ ಚೆಕ್ ಪುಸ್ತಕಗಳನ್ನು ಬಳಸುತ್ತಿದ್ದರು. ‘‘ಈ ಹಿಂದಿನ ಒಬಿಸಿ ಹಾಗೂ ಯುಎನ್‌ಐಯ ಹಳೆಯ ಚೆಕ್ ಪುಸ್ತಕಗಳನ್ನು 2021 ಅಕ್ಟೋಬರ್ 1ರಿಂದ ರದ್ದುಗೊಳಿಸಲಾಗಿದೆ. ನಿಮ್ಮ ಈ ಹಿಂದಿನ ಒಬಿಸಿ ಹಾಗೂ ಯುಎನ್‌ಐ ಚೆಕ್ ಪುಸ್ತಕವನ್ನು ಪಿಎನ್‌ಬಿ ಚೆಕ್ ಪುಸ್ತಕಕ್ಕೆ ಬದಲಾಯಿಸಿಕೊಳ್ಳಿ. ಜೊತೆಗೆ ಪಿಎನ್‌ಬಿಯ ಐಎಫ್‌ಎಸ್‌ಸಿ ಹಾಗೂ ಎಂಐಸಿಆರ್‌ಗಳನ್ನು ಪರಿಷ್ಕೃತಗೊಳಿಸಿ’’ ಎಂದು ಪಿಎನ್‌ಬಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ.





