ಮಲದ್ವಾರದ ಸಮಸ್ಯೆಯಿಂದ ಬಳಲುತ್ತಿರುವ ಆರು ವರ್ಷದ ಬಾಲಕಿ: ಸಹಾಯಕ್ಕೆ ಮನವಿ

ಮಂಗಳೂರು : ಆರು ವರ್ಷದ ಬಾಲಕಿಯೊಬ್ಬಳು ಮಲದ್ವಾರದ ಸಮಸ್ಯೆಯನ್ನು ಎದುರಿಸುತ್ತಿದ್ದು, ಚಿಕಿತ್ಸೆಗೆ ದಾನಿಗಳು ಆರ್ಥಿಕ ಸಹಾಯ ಮಾಡುವಂತೆ ಬಾಲಕಿಯ ತಂದೆ ಮುಹಮ್ಮದ್ ರಫೀಕ್ ಮನವಿ ಮಾಡಿದ್ದಾರೆ.
‘ನನ್ನ ಮೂವರು ಹೆಣ್ಮಕ್ಕಳ ಪೈಕಿ ತಂಝೀಮ್ (6) ಕೊನೆಯವಳು. ತಂಝೀಮ್‌ಗೆ ಈಗಾಗಲೇ ನಾಲ್ಕು ಶಶ್ತ್ರಚಿಕಿತ್ಸೆ ಆಗಿದ್ದು, ಹುಟ್ಟಿದಾಗಲೆ ಮಲದ್ವಾರವಿರಲಿಲ್ಲ. ಹೊಟ್ಟೆಯ ಎಡಭಾಗದಲ್ಲಿ ಅದಕ್ಕೆ ಪರ್ಯಾಯ ಚಿಕಿತ್ಸೆ ಮಾಡಲಾಗಿತ್ತು. 2 ವರ್ಷದ ಬಳಿಕ ಮತ್ತೆ ನಡೆಸಿದ ಚಿಕಿತ್ಸೆ ವಿಫಲವಾದ ಕಾರಣ ಹೊಟ್ಟೆ ದಪ್ಪವಾಗಿ, ತಿಂದ ಆಹಾರವೆಲ್ಲಾ ಬಾಯಿಯಿಂದ ಹೊರಗೆ ಬರತೊಡಗಿತು. ಈ ಮಧ್ಯೆ ಅನ್ನನಾಳದ ಸಮಸ್ಯೆಯಿಂದ ತಿಂದ ಆಹಾರ ಹೊಟ್ಟೆ ಸೇರುವ ಬದಲು ಎದೆ ಭಾಗ ಸೇರುತ್ತಿತ್ತು. ಅದಕ್ಕಾಗಿ ಬೆನ್ನಿನ ಬಲಭಾಗದಲ್ಲಿ ಶಶ್ತ್ರಚಿಕಿತ್ಸೆ ಮಾಡಲಾಗಿದೆ. ಆದಾಗ್ಯೂ ಎದೆಯಲ್ಲಿ ನೀರು ಮತ್ತು ವಾಯು ತುಂಬಿ ಹೃದಯ ಬಲಭಾಗಕ್ಕೆ ವಾಲಿದೆ. ಅದಕ್ಕಾಗಿ ಆಗಸ್ಟ್ 15ರಂದು ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಯಿತು. ಆದಾಗ್ಯೂ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೆ ಆಗಸ್ಟ್ 30ರಂದು ದಾಖಲಿಸಲಾಗಿದೆ’ ಎಂದು ಮುಹಮ್ಮದ್ ರಫೀಕ್ ಶರೀಫ್ ಸಾಬ್ ಮುಲ್ಲಾ ತಿಳಿಸಿದ್ದಾರೆ.
‘ನಾನು ಶಿರಸಿ ನಿವಾಸಿ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವೆ. 6 ವರ್ಷದ ಮಗಳಿಗಾಗಿ ಈಗಾಗಲೆ 5 ಲಕ್ಷ ರೂ. ವ್ಯಯಿಸಿದ್ದು, ಮೂರು ಲಕ್ಷ ರೂ. ಸಾಲವೂ ಇದೆ. ವೈದ್ಯರು ಹೇಳುವ ಪ್ರಕಾರ ನನ್ನ ಮಗಳು ಗುಣಮುಖಳಾಗಲು ಇನ್ನೂ ಹಲವು ವರ್ಷಗಳು ಬೇಕು. ಒಟ್ಟಿನಲ್ಲಿ ನಾನೀಗ ಆರ್ಥಿಕವಾಗಿ ತುಂಬಾ ಸಮಸ್ಯೆಯಲ್ಲಿದ್ದು, ಮಗಳ ಚಿಕಿತ್ಸೆಗೆ ನೆರವು ನೀಡಿ ಸಹಕರಿಸಬೇಕು’ ಎಂದು ಮುಹಮ್ಮದ್ ರಫೀಕ್ ಮನವಿ ಮಾಡಿದ್ದಾರೆ.
ಮುಹಮ್ಮದ್ ರಫೀಕ್ ಎಸ್. ಮುಲ್ಲಾ/ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಉಳಿತಾಯ ಖಾತೆ ಸಂಖ್ಯೆ: 34367862136, (ಐಎಫ್‌ಎಸ್‌ಸಿ ಕೋಡ್-SBIN0000917) ಶಿರಸಿ ಬ್ರಾಂಚ್‌ಗೆ ಧನ ಸಹಾಯ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 8861881906ನ್ನು ಸಂಪರ್ಕಿಸಬಹುದಾಗಿದೆ.







