ಸೂರತ್ ನಲ್ಲಿ ಬಿಜೆಪಿ ಮಂದಿರ ಧ್ವಂಸ ಮಾಡಿದ್ದು ಹಿಂದೂಗಳಿಗೆ ಮಾಡಿದ ಅವಮಾನ: ಆಮ್ ಆದ್ಮಿ ಪಕ್ಷ

Photo: Patrika.com
ಸೂರತ್: "ಇದು ರಾಜ್ಯದಲ್ಲಿ ಹಿಂದೂಗಳಿಗೆ ಮಾಡಿದ ಅವಮಾನ" ಎಂದ ಆಮ್ ಆದ್ಮಿ ಪಕ್ಷ ಗುಜರಾತ್ ಘಟಕವು ಶುಕ್ರವಾರ ಬಿಜೆಪಿ ಆಡಳಿತದಲ್ಲಿರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಎಂಸಿ) ದೇವಸ್ಥಾನವನ್ನು ಕೆಡವಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿಯವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
ಮೆಟ್ರೋ ರೈಲು ಯೋಜನೆಗಾಗಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಬುಧವಾರ ನಗರದ ಕಪೋದ್ರಾ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿರ್ಮಿಸಲಾದ ರಾಮದೇವ್ ಪೀರ್ ದೇವಸ್ಥಾನವನ್ನು ಭಾರೀ ಪೊಲೀಸ್ ಬಂದೋಬಸ್ತ್ ಅಡಿಯಲ್ಲಿ ನಾಗರಿಕ ಸಂಸ್ಥೆಯು ನೆಲಸಮಗೊಳಿಸಿದೆ.
ಕೆಡಹುವಿಕೆಯನ್ನು ಖಂಡಿಸಿದ ರಾಜ್ಯ ಎಎಪಿ ನಾಯಕ ಇಸುಧನ್ ಗಾಧ್ವಿ, ದೇವಸ್ಥಾನವು ಹಿಂದೂಗಳ ಭಕ್ತಿಯ ಸಂಕೇತವಾಗಿದೆ ಎಂದು ಹೇಳಿದರು. "ಸೂರತ್ನ ರಾಮದೇವ್ ಪೀರ್ ದೇವಸ್ಥಾನವು ಹಲವು ದಶಕಗಳಿಂದ ಅಲ್ಲಿದ್ದು ಹಿಂದೂಗಳ ಭಕ್ತಿಯ ಸಂಕೇತವಾಗಿರುವುದನ್ನು ನೀವು ನೋಡಬಹುದು. ಈ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅನೇಕ ಸಮುದಾಯಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸುತ್ತಿದ್ದವು" ಎಂದರು
ಜೆಸಿಬಿ ಯಂತ್ರಗಳು ದೇವಾಲಯವನ್ನು ಧ್ವಂಸಗೊಳಿಸುತ್ತಿರುವಾಗ ಅಲ್ಲಿನ ಅರ್ಚಕ ಅಳುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಈ ವೀಡಿಯೊವನ್ನು ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಪ್ರದರ್ಶಿಸಿದರು.
"ಇಂದು ಗುಜರಾತ್ ನ ಹಿಂದೂ ಸಮಾಜವು ನೋಯಿಸಲ್ಪಟ್ಟಿದೆ ಮತ್ತು ಮಂದಿರ ಉರುಳಿಸುವಾಗ ಅಲ್ಲಿನ ಅರ್ಚಕ ಅಳುತ್ತಿರುವುದನ್ನು ಕಾಣಬಹುದು. ಮಂದಿರ ಉರುಳಿಸುವ ಮುಂಚೆ ಅಲ್ಲಿನ ಪುರೋಹಿತರು ಮತ್ತು ಧಾರ್ಮಿಕ ನಾಯಕರನ್ನು ಕೇಳುವ ಕುರಿತು ನೀವು ತಲೆಕೆಡಿಸಿಕೊಂಡಿಲ್ಲ. ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ಪ್ರತಿಭಟಿಸಲು ಯತ್ನಿಸಿದಾಗ, ನೀವು ಪೊಲೀಸರನ್ನು ಬಲಪ್ರಯೋಗ ಮಾಡಲು, ಬಂಧಿಸಲು ಮತ್ತು ಬಂಧಿಸುವ ಬೆದರಿಕೆ ಹಾಕಲು ಬಳಸಿದ್ದೀರಿ. ಬ್ರಿಟಿಷರು ಕೂಡ ದೇವಸ್ಥಾನಗಳನ್ನು ಮುಟ್ಟಲು ಧೈರ್ಯ ಮಾಡಲಿಲ್ಲ ಮತ್ತು ಮಹಮದ್ ಘಜ್ನಿ ಕೂಡ ಈ ಮಟ್ಟಿಗೆ ಕುಣಿಯಲಿಲ್ಲ.ಹಾಗಾದರೆ ಗುಜರಾತಿನಲ್ಲಿ ಬಿಜೆಪಿ ಅದನ್ನು ಹೇಗೆ ನಿರ್ವಹಿಸಿತು? ನಮ್ಮ ಪೂರ್ವಜರು ನಮ್ಮ ದೇವಸ್ಥಾನಗಳಿಗಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ "ಎಂದು ಗಾಧ್ವಿ ಹೇಳಿದರು.







