ದ.ಕ. ಜಿಲ್ಲೆ : 141 ಮಂದಿಗೆ ಕೋವಿಡ್ ಪಾಸಿಟಿವ್; ಇಬ್ಬರು ಮೃತ್ಯು

ಮಂಗಳೂರು, ಸೆ.10: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 141 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,12,060 ಕ್ಕೇರಿದೆ. ಪಾಸಿಟಿವಿಟಿ ದರ ಶೇ.1.23ಕ್ಕೆ ಇಳಿದಿದೆ.
ಶುಕ್ರವಾರ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈವರೆಗೆ 1,606 ಮಂದಿ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ 195 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ 1,08,428 ಮಂದಿ ಗುಣಮುಖ ರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,026 ಕೋವಿಡ್ ಸಕ್ರಿಯ ಪ್ರಕರಣವಿದೆ.
Next Story





