ದ.ಕ.ಛಾಯಾಗ್ರಾಹಕರ ಸಂಘದ ಉಡುಪಿ ವಲಯಾಧ್ಯಕ್ಷರಾಗಿ ಜನಾರ್ದನ ಕೊಡವೂರು

ಉಡುಪಿ, ಸೆ.11: ಸೌತ್‌ಕೆನಾ ಪೋಟೋಗ್ರಾಫರ್ಸ್ ಅಸೋಷಿಯೇಷನ್‌ನ ಉಡುಪಿ ವಲಯಾಧ್ಯಕ್ಷರಾಗಿ ಉಡುಪಿಯ ಜನಾರ್ದನ ಕೊಡವೂರು ಆಯ್ಕೆ ಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಜಯಕರ ಸುವರ್ಣ, ಪ್ರಧಾನ ಕಾರ್ಯದರ್ಶಿ ಯಾಗಿ ಪ್ರವೀಣ್ ಕೊರೆಯ, ಕೋಶಾಧಿಕಾರಿಯಾಗಿ ದಿವಾಕರ ಹಿರಿಯಡ್ಕ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಸುರಭಿ ಸುಧೀರ್ ಶೆಟ್ಟಿ, ಪ್ರವೀಣ್ ಹೂಡೆ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಆತ್ರಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಮಂಜುನಾಥ್ ಪರ್ಕಳ, ದಾಮೋದರ ಸುವರ್ಣ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸತೀಶ್ ಶೇರಿಗಾರ್, ಹರೀಶ್ ಅಲೆವೂರು ನೇಮಕಗೊಂಡಿದ್ದಾರೆ.
Next Story





