ಹಸ್ಸನ್ ಮುಬಾರಕ್
ಕೋಟ, ಸೆ.11: ಮಧುವನದ ಹಸ್ಸನ್ ಮುಬಾರಕ್ (73) ಇವರು ಕಣ್ಣಂಗಾರ್ನ ಮಗಳ ಮನೆಯಲ್ಲಿ ಶನಿವಾರ ಬೆಳಿಗ್ಗೆ 11:30ಕ್ಕೆ ಹೃದಯಘಾತ ದಿಂದ ನಿಧನರಾದರು.
ಮುಬಾರಕ್ ಇವರು ಮಧುವನ ಜುಮಾ ಮಸೀದಿಯ ಅಧ್ಯಕ್ಷರಾಗಿ 27 ವರ್ಷ ಕಾರ್ಯ ನಿರ್ವಹಿಸಿದ್ದರಲ್ಲದೇ, ಕೋಟ ಜಾಮಿಯಾ ಮಸೀದಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಐವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ ಸೂಚನೆ: ಕುಂದಾಪುರದ ನ್ಯಾಯವಾದಿ ಸೋಮನಾಥ ಹೆಗ್ಡೆ, ಕೋಟ ಜಾಮಿಯಾ ಮಸೀದಿ ಕಮಿಟಿಯವರು, ಮಧುವನ ಜುಮಾ ಮಸೀದಿ ಜಮಾತ್ ಬಾಂಧವರು ಹಾಗೂ ಊರಗಣ್ಯರು ಹಸ್ಸನ್ ಮುಬಾರಕ್ರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Next Story