ಚಿಲಿ: ಜುರಾಸಿಕ್ ಯುಗದ ರೆಕ್ಕೆಯ ಹಲ್ಲಿಯ ಅವಶೇಷ ಪತ್ತೆ

photo:twitter.com/@readnewsdesk
ಸ್ಯಾಂಟಿಯಾಗೊ, ಸೆ.11: ಡೈನಾಸರ್ ಜಾತಿಗೆ ಸೇರಿದ, ಟೆರೊಸಾರ್ ಎಂದು ಕರೆಯಲಾಗುವ, ಜುರಾಸಿಕ್ ಯುಗದ ರೆಕ್ಕೆಯ ಹಲ್ಲಿಯ ಅವಶೇಷವನ್ನು ದಕ್ಷಿಣ ಗೋಳಾರ್ಧದಲ್ಲಿ ಇದೇ ಪ್ರಥಮ ಬಾರಿಗೆ ಪತ್ತೆಹಚ್ಚಿರುವುದಾಗಿ ಚಿಲಿಯ ವಿಜ್ಞಾನಿಗಳು ಘೋಷಿಸಿದ್ದಾರೆ.
ಅಟಕಾಮ ಮರುಭೂಮಿಯಲ್ಲಿ ಸುಮಾರು 160 ಮಿಲಿಯನ್ ವರ್ಷದ ಹಿಂದೆ ಜೀವಿಸಿದ್ದ ಈ ಬೃಹತ್ ಜೀವಿಯ ಅವಶೇಷ 2009ರಲ್ಲಿ ಪತ್ತೆಯಾಗಿದೆ. ಇದು ಇತಿಹಾಸ ಪೂರ್ವದ ವಿಶಿಷ್ಟ ಭೂಖಂಡ ಗೊಂಡ್ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ, ಬಳಿಕ ದಕ್ಷಿಣ ಗೋಳಾರ್ಧದಲ್ಲಿ ನೆಲೆ ಕಂಡುಕೊಂಡ ಟೆರೊಸಾರ್ ಪ್ರಭೇಧದ ಜೀವಿ ಎಂಬುದು ನಿರಂತರ ಸಂಶೋಧನೆಯ ಬಳಿಕ ಇದೀಗ ದೃಢಪಟ್ಟಿದೆ.
ಈ ಜೀವಿಗೆ ಸುಮಾರು 2 ಮೀಟರ್ನಷ್ಟು ಗಾತ್ರದ ರೆಕ್ಕೆಗಳು, ಉದ್ದವಾದ ಬಾಲ ಮತ್ತು ಚೂಪಾದ ಮೂತಿ ಇತ್ತು . ಈ ಪ್ರಾಣಿಗಳ ತಳಿಗಳ ಸಂಖ್ಯೆ ನಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚಿದ್ದು ಚಿಲಿಯಲ್ಲಿ ಪತ್ತೆಯಾಗಿರುವುದು ಈ ಪ್ರಬೇಧದ ಅತ್ಯಂತ ಪ್ರಾಚೀನ ಟೆರೊಸಾರ್ ಎಂದು ಎಂದು ಚಿಲಿ ವಿವಿಯ ಸಂಶೋಧಕ ಜೊನಾಥನ್ ಅಲಾರ್ಕನ್ ಹೇಳಿದ್ದಾರೆ.
Next Story





