ಉಳ್ಳಾಲ: ಉಚಿತ ಲಸಿಕಾ ಶಿಬಿರ

ಉಳ್ಳಾಲ: ಲಯನ್ಸ್ ಕ್ಲಬ್ ಪೆರ್ಮನ್ನೂರು ಫೋಕಸ್ ಹಾಗೂ ರಿಚಲ್ ಚಾರಿಟೇಬಲ್ ಟ್ರಸ್ಟ್ ತೊಕ್ಕೊಟ್ಟು ಇದರ ಜಂಟಿ ಆಶ್ರಯದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶಾಸಕ ಖಾದರ್ ಅವರ ಸಹಕಾರದಿಂದ ಭಟ್ ನಗರ ದಲ್ಲಿ ಉಚಿತ ಲಸಿಕಾ ಶಿಬಿರವು ಶನಿವಾರ ನಡೆಯಿತು.
ಉಳ್ಳಾಲ ನಗರ ಸಭಾ ಕೌನ್ಸಿಲರ್ ಗೀತಾ ಬಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ವಿಕ್ರಮ ಶೆಟ್ಟಿ ಅವರು, ಲಸಿಕಾ ಶಿಬಿರ ಜನರಿಗೆ ಅಗತ್ಯ ವಾಗಿದೆ.ಆದರೆ ಇದನ್ನು ಸುಲಭದಲ್ಲಿ ಜನರ ಬಳಿ ತಲುಪಿಸುವ ಕಾರ್ಯವನ್ನು ಸಂಘಟನೆಗಳು ಮಾಡುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಸುರೇಶ್ ಭಟ್ ನಗರ ಅವರು ಕೋವಿಡ್ ಲಸಿಕೆ ಜನರಿಗೆ ಈ ಸಂದರ್ಭದಲ್ಲಿ ಅಗತ್ಯ ವಾಗಿ ಬೇಕಾಗಿದೆ. ಲಸಿಕೆಗಾಗಿ ಕೆಲವರು ಬಹಳಷ್ಟು ಹುಡುಕಾಟ, ಪ್ರಯತ್ನ ಕೂಡ ನಡೆಸಿದ್ದಾರೆ.ಈ ಊರಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಡಾ.ರಾಜೇಶ್, ಸಿರಿಲ್ ರೋಬರ್ಟ್ ಡಿಸೋಜ, ಅರುಣ್ ಮೊಂತೆರೊ ,ಗೀತಾ ಬಾಯಿ,ಸುರೇಶ್ ಭಟ್ನಗರ್, ಡಾ.ವಿಕ್ರಮ ಶೆಟ್ಟಿ, ಫ್ರಾಂಕ್ಲಿನ್ ಕುಟ್ಟಿನ್ಹ , ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಜಗದೀಶ್, ಲಯನ್ ರೋಹನ್, ಲಯನ್ ಪ್ರಕಾಶ್ ಪಿಂಟೋ, ಲಯನ್ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಅರುಣ್ ಮೊಂತೆರೊ ಸ್ವಾಗತಿಸಿದರು. ಜೆಸಿಂತಾ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿ ವಂದಿಸಿದರು






.jpeg)

.jpeg)



