ಮೇಲ್ತೆನೆ ವೀಡಿಯೊ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ: ನವಾಝ್ ಕಡಂಬು ಪ್ರಥಮ

ನವಾಝ್ ಕಡಂಬು, ತಾಹಿರಾ ಸಿರಾಜ್, ಶಾಹಿದಾ ಮೈಕಾಲ
ಮಂಗಳೂರು, ಸೆ.12: ದೇರಳಕಟ್ಟೆಯ ಮೇಲ್ತೆನೆ ಸಂಘಟನೆಯು ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಬ್ಯಾರಿ ಭಾಷಾ ದಿನಾಚರಣೆಯ ಮಹತ್ವ ಎಂಬ ವಿಷಯದಲ್ಲಿ ಏರ್ಪಡಿಸಿದ ವೀಡಿಯೊ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ನವಾಝ್ ಕಡಂಬು ವಿಟ್ಲ (ಪ್ರಥಮ) ಮತ್ತು ತಾಹಿರಾ ಸಿರಾಜ್ ಕೂಳೂರು (ದ್ವಿತೀಯ) ಹಾಗೂ ಶಾಹಿದಾ ಮೈಕಾಲ (ತೃತೀಯ) ಅವರು ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ತೀರ್ಪುಗಾರರಾಗಿ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಟಿ., ಲೇಖಕಿ ಸಿಹಾನಾ ಬಿ.ಎಂ., ಲೇಖಕ ಎ.ಕೆ.ನಂದಾವರ ಸಹಕರಿಸಿದ್ದರು.
ಅಕ್ಟೋಬರ್ 3ರಂದು ದೇರಳಕಟ್ಟೆಯಲ್ಲಿ ನಡೆಯುವ ಬ್ಯಾರಿ ಭಾಷಾ ದಿನಾಚರಣಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಅಶೀರುದ್ದೀನ್ ಸಾರ್ತಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





