ಕಾಂಗ್ರೆಸ್ ನಿಂದ ಎತ್ತಿನಗಾಡಿ ಚಲೋ: 'ಇದು ಸಿದ್ದು, ಡಿಕೆಶಿ ಕಲಹದ ಬಂಡಿ' ಎಂದ ಬಿಜೆಪಿ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ವಿಧಾನಸೌಧಕ್ಕೆ `ಎತ್ತಿನ ಗಾಡಿ'ಯಲ್ಲಿ ತೆರಳುವ ಮೂಲಕ ಪ್ರತಿಭಟನೆ ನಡೆಸುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಇದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರರ ಕಲಹದ ಬಂಡಿ ಎಂದು ಟೀಕಿಸಿದೆ.
'ಎತ್ತಿನಗಾಡಿ ಪ್ರತಿಭಟನೆ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರ ಎತ್ತುಗಳು ಪರಸ್ಪರ ವಿರುದ್ಧ ದಿಕ್ಕಿಗೆ ಎಳೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವನ್ನೇ ನೀಡಿರಲಿಲ್ಲ' ಎಂದು ದೂರಿದೆ.
ಎತ್ತಿನಗಾಡಿ ಪ್ರತಿಭಟನೆ ಮಾಡಲು ಹೊರಟಿರುವ @INCKarnataka ಪಕ್ಷದ ಎತ್ತುಗಳು ಪರಸ್ಪರ ವಿರುದ್ಧ ದಿಕ್ಕಿಗೆ ಎಳೆಯುತ್ತಿವೆ.
— BJP Karnataka (@BJP4Karnataka) September 13, 2021
ಕೆಪಿಸಿಸಿ ಅಧ್ಯಕ್ಷ @DKShivakumar ಅವರಿಗೆ ವಿಪಕ್ಷ ನಾಯಕ @siddaramaiah ಅವರು ಈ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವನ್ನೇ ನೀಡಿರಲಿಲ್ಲ.
ಇದು ಸಿದ್ದು & ಡಿಕೆಶಿ ಕಲಹದ ಬಂಡಿ!#CongressVsCongress







