ಆಸ್ಕರ್ ಫೆರ್ನಾಂಡಿಸ್ ನಿಧನ: ಮಂಗಳೂರು ಬಿಷಪ್ ಸಂತಾಪ

ಮಂಗಳೂರು, ಸೆ.13: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ, ಆಸ್ಕರ್ ರ್ಫೆರ್ನಾಂಡಿಸ್ ತನ್ನ ರಾಜಕೀಯ ಜೀವನದಲ್ಲಿ, ಕರಾವಳಿಯ ಜನತೆಗೆ ಪ್ರತ್ಯೇಕವಾಗಿ ಮಂಗಳೂರಿನ ಜನತೆಗೆ ಜಾತಿ, ಮತ ಲೆಕ್ಕಿಸದೆ ಅನನ್ಯ ಸೇವೆ ಸಲ್ಲಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ, ಕರಾವಳಿಯನ್ನು ಪ್ರತಿನಿಧಿಸಿದ್ದ ಒಬ್ಬ ಉತ್ತಮ ವ್ಯಕ್ತಿಯನ್ನು ನಾವಿಂದು ಕಳಕೊಂಡಿದ್ದೇವೆ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಪೀಟರ್ ಪಾವ್ಲ್ ಸಲ್ದಾನ್ಹಾ ಸಂತಾಪ ಸೂಚಿಸಿದ್ದಾರೆ.
ಆಸ್ಕರ್ ಫೆರ್ನಾಂಡೀಸ್‌ರ ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ಕೋರುತ್ತೇನೆ ಹಾಗೂ ಆಸ್ಕರ್ ಫೆರ್ನಾಂಡಿಸ್‌ರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಲಿ ಎಂದು ಬೇಡುತ್ತೇನೆ ಎಂದು ಮಂಗಳೂರು ಧರ್ಮಪ್ರಾಂತದ ಕೆಥೋಲಿಕ್ ಕ್ರೈಸ್ತರ ಪರವಾಗಿ ಬಿಷಪ್ ತಿಳಿಸಿದ್ದಾರೆ.
Next Story





