ಆಸ್ಕರ್ ಫೆರ್ನಾಂಡಿಸ್ ನಿಧನ: ಉಡುಪಿ ಪ್ರದೇಶ ಕೆಥೋಲಿಕ್ ಸಭಾ ಸಂತಾಪ

ಉಡುಪಿ, ಸೆ.13: ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶ್ರೀಸಾಮಾನ್ಯರ ಪ್ರಭಾವಿ ಸಂಘಟನೆಯಾಗಿರುವ ಕೆಥೊಲಿಕ್ ಸಭಾವನ್ನು ಈ ಹಿಂದಿನ ಮಂಗಳೂರು ಧರ್ಮಪ್ರಾಂತವಿದ್ದ ವೇಳೆಯಲ್ಲಿ ಹುಟ್ಟುಹಾಕಿ ಅದರ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯ ಏಳಿಗೆಗಾಗಿ ಅವರು ವಹಿಸಿದ ನಾಯಕತ್ವ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾದುದು.
ಅವರು ಸಂಘಟನೆಗೆ ಹಾಕಿದ ಭದ್ರ ಬುನಾದಿಯ ಫಲವಾಗಿ ಇಂದು ಕೆಥೊಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮುದಾಯದ ಪ್ರಭಾವಿ ಸಂಘಟನೆಯಾಗಿ ಬೆಳೆದು ಬಂದಿದೆ. ಒರ್ವ ಸರಳ ಹಾಗೂ ಸಜ್ಜನ ನಾಯಕರಾಗಿ ತಮ್ಮ ಸೇವೆಯನ್ನು ಈ ದೇಶಕ್ಕೆ ನೀಡಿದ್ದಾರೆ. ಅವರ ನಿಧನ ಕೆಥೊಲಿಕ್ ಸಭಾ ಸಂಘಟನೆಗೆ ಹಾಗೂ ಇಡೀ ರಾಷ್ಟ್ರ ಬಹುದೊಡ್ಡ ನಷ್ಟವಾಗಿದ್ದು ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಸಂಘಟನೆಯ ಅಧ್ಯಕ್ಷರಾದ ಮೇರಿ ಡಿಸೋಜಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Next Story





