Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಟ್ಯಾಲೆಂಟ್ ಅಕಾಡಮಿಕ್ ಮದ್ರಸ...

​ಟ್ಯಾಲೆಂಟ್ ಅಕಾಡಮಿಕ್ ಮದ್ರಸ ಎಕ್ಸೆಲೆನ್ಸಿ ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ13 Sept 2021 9:38 PM IST
share
​ಟ್ಯಾಲೆಂಟ್ ಅಕಾಡಮಿಕ್ ಮದ್ರಸ ಎಕ್ಸೆಲೆನ್ಸಿ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.13: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ ಮಂಗಳೂರು ಇದರ ವತಿಯಿಂದ ಟ್ಯಾಲೆಂಟ್ ಅಕಾಡಮಿಕ್ (ಶಾಲಾ ಮತ್ತು ಕಾಲೇಜು) ಮದ್ರಸ ಎಕ್ಸಲೆನ್ಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರವಿವಾರ ನಗರದ ಟ್ಯಾಲೆಂಟ್ ಕಾನ್ಫೆರೆನ್ಸ್ ಹಾಲ್‌ನ ಮರ್ಹೂಂ ಬೇಕಲ ಇಬ್ರಾಹೀಂ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಿತು.

ಮನಲ್ ಕೋಚಿಂಗ್ ಸ್ಟಡಿ ಸೆಂಟರ್‌ನ ವ್ಯವಸ್ಥಾಪಕ ಕಾಪು ಹನೀಫ್ ಮಹಮ್ಮದ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎಸ್‌ಜೆಎಂ ರಾಜ್ಯ ಉಪಾಧ್ಯಕ್ಷ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾ, ಕೇರಳ ಬೋರ್ಡ್ ಎಸ್‌ಕೆಐಎಂ ಮುಫತ್ತಿಸ್ ಕೆ.ಎಂ. ಉಮರ್ ದಾರಿಮಿ ಸಾಲ್ಮರ, ನಂಡೆ ಪೆಂಙಳ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ ಮೆಂಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ರಫೀಕ್ ಕೊಡಾಜೆ, ಆದರ್ಶ್ ಶಿಕ್ಷಣ ಸಂಸ್ಥೆ ತೋಡಾರ್ ಇದರ ಅಧ್ಯಕ್ಷ ಮುಹಮ್ಮದ್ ಆಸಿಫ್ ಸೂರಲ್ಪಾಡಿ, ಉಮ್ಮಾಗೊರು ಅಗ ಅಧ್ಯಕ್ಷ ಮುಸ್ತಫ ಅಡ್ಡೂರು ದೆಮ್ಮಲೆ, ನ್ಯಾಯವಾದಿ ಅಬೂಬಕ್ಕರ್ ಸಿದ್ದೀಕ್ ಎಂ.ಪಿ, ವಿಶ್ವಾಸ್ ರಿಯಲ್ಟಿಯ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ ಭಾಗವಹಿಸಿದ್ದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾರ್ತಿಕ್ ಎಸ್. ಪೂಜಾರಿ (ಸರಕಾರಿ ಪ್ರೌಢಶಾಲೆ ಚೆಳಾಯಾರು), ಎನ್. ಪ್ರತೀಕ್ ಮಲ್ಯ (ಎಸ್.ವಿ.ಎಸ್ ಟೆಂಪಲ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ), ಶಮ್ರೀನಾ (ವಿದ್ಯರಶ್ಮಿ ವಿದ್ಯಾಲಯ ಸವಣೂರು), ಹಾಝರ ತರನ್ನುಮ್ (ಸೈಂಟ್ ಮೇರೀಸ್ ಪ್ರೌಢ ಶಾಲೆ ಮಂಗಳೂರು), ಶಮ್ರೀನಾ (ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಬಿ.ಸಿ. ರೋಡ್), ಕೆ. ಮುಹಮ್ಮದ್ ಅಫ್ನಾನ್ (ಸುದನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರು), ಪಿಯು ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಹಾ ಎಚ್.ಅಮೀನ್( ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು), ಅಲೀನ್ ಕ್ಲಾರೆಸ್ಟಾ ಡಿಸೋಜ (ಸೈಂಟ್ ಆಗ್ನೆಸ್ ಪಿ ಯು ಕಾಲೇಜು ಮಂಗಳೂರು), ಸುಹೈನಾ ಆಯಿಶಾ ಶಹೀನ್ (ಪಿಯು ಕಾಲೇಜು ಮಂಗಳೂರು), ಎಸ್. ಮುಹಮ್ಮದ್ ಆಶಿಕ್ (ಅಂಬಿಕಾ ವಿದ್ಯಾಲಯ ಪುತ್ತೂರು), ವಾಣಿಜ್ಯ ವಿಬಾಗದಲ್ಲಿ ಮುಹಮ್ಮದ್ ಮರ್ಷದ್ (ಪ್ರೆಸ್ಟೆಜ್‌ಪಿಯು ಕಾಲೇಜು ಮಂಗಳೂರು), ಆಯಿಷಾ ನಫೀಹಾ ಕಣ್ಣೂರು (ವುಮೆನ್ಸ್ ಪಿಯು ಕಾಲೇಜು ಕಣ್ಣೂರು), ಎಚ್.ಅತೀಷ್ ಅಕ್ರಂ (ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ), ಕಲಾ ವಿಭಾಗದಲ್ಲಿ ಸೈಫಾನ ಶೇಖ್ (ಹಿರಾ ವಿಮೆನ್ಸ್ ಪಿಯು ಕಾಲೇಜು ಬಬ್ಬುಕಟ್ಟೆ), ನಫೀಸಾ ಮಿಶ್ರಿಯಾ (ಮೆಲ್ಕಾರ್ ವಿಮೆನ್ಸ್ ಪಿಯು ಕಾಲೇಜು ಮೆಲ್ಕಾರ್) ಅವರನ್ನು ಸನ್ಮಾನಿಸಲಾಯಿತು.

ಮದ್ರಸದ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 5ನೇ ತರಗತಿಯ ಫಾತಿಮ ಅಯಿಝಾ (ಹಿದಾಯತುಲ್ ಇಸ್ಲಾಮ್ ಮದ್ರಸ ತೋಡಾರ್), ಮುಹಮ್ಮದ್ ನಜೀಬ್ ಅನ್ವರ್ ( ಸುಲ್ಲಾ ಮ್ಸಿಬಿಯಾನ್ ಮದ್ರಸ ಪರ್ಪುಂಜೆ), ರೀಮ್ ಮಾಸೂಮ್ (ನೂರುಲ್‌ ಇಸ್ಲಾಮ್ ಮದ್ರಸ ಕಕ್ಕಿಂಜೆ), ವಫೀಖ ಬೇಗಮ್ (ದಾರುಲ್ ಉಲೂಮ್ ಅರಬಿಕ್ ಮದ್ರಸ ಗುಂಡುಕಲ್), ಫಾತಿಮತ್ ನಿದಾ (ಹಯಾತುಲ್‌ ಇಸ್ಲಾಮ್ ಮದ್ರಸ ಬೊಲ್ಮಾರ್) 7ನೇ ತರಗತಿಯ ಫಾತಿಮತ್ ಸಫಾ (ಖುತುಬೀಯ ಮದ್ರಸ ಕೆಮ್ಮಾರ), ಫಾತಿಮತ್ ಶೈಮಾ (ಎಸ್‌ಎಂ ಮುನವ್ವರುಲ್‌ ಇಸ್ಲಾಂ ಮದ್ರಸ ಗಾಂಧಿನಗರ), ಆಯಿಶಾ ಹಿಸ್ನಾ (ಹಯಾತುಲ್‌ ಇಸ್ಲಾಮ್ ಮದ್ರಸ ಬಡಕಬೈಲ್), ಆಯಿಶಾ ಎಚ್‌ಕೆ (ಮದ್ರಸತುಲ್ ಬದ್ರಿಯಾ ಬಂಗ್ಲಗುಡ್ಡೆ), ರಮೀಝಾ (ಹಯಾತುಲ್‌ ಇಸ್ಲಾಮ್ ಮದ್ರಸ ಬೊಲ್ಮಾರ್) 10ನೇ ತರಗತಿಯ ಫಾತಿಮತ್ ನಜೀಹಾ (ಬದ್ರಿಯಾ ಮದ್ರಸ ಕುಲಾಲ್), ನಫೀಸತುಲ್ ಮಿಶ್ರಿಯಾ ( ನೂರುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ಬಾದಪುಣಿ), ಫಾತಿಮತ್ ಶೈಬಾ (ಮುನವ್ವರುಲ್‌ ಇಸ್ಲಾಂ ಮದ್ರಸ ಗಾಂಧಿನಗರ) 12ನೇ ತರಗತಿಯ ಝೈನಬಾ (ಹಯಾತುಲ್‌ ಇಸ್ಲಾಮ್ ಮದ್ರಸ ದೇರಳಕಟ್ಟೆ), ಆಯಿಶಾ ಫಲೀಲಾ (ಹಯಾತುಲ್‌ ಇಸ್ಲಾಮ್ ಮದ್ರಸ ದೇರಳಕಟ್ಟೆ), ಖದೀಜತ್ ರುಹೈಮ ಎಸ್‌ಎ (ಮುನವ್ವರುಲ್‌ ಇಸ್ಲಾಂ ಮದ್ರಸ ಗಾಂಧಿನಗರ ) ಅವರನ್ನು ಸನ್ಮಾನಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ, ನಗದು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಶಿಕ್ಷಕ ರಫೀಕ್ ಮಾಸ್ಟರ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಿಯಾಝ್ ಕಣ್ಣೂರು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ಅಬ್ದುಲ್ ಸಲಾಂ ಪೆರ್ನೆ ಕಿರಾಅತ್ ಪಠಿಸಿದರು. ಹಮೀದ್ ಕಣ್ಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಕಾಶ್ ಬಾಂಬಿಲ ಸ್ವಾಗತಿಸಿದರು. ಜಸೀಮ್ ಸಜಿಪ ವಂದಿಸಿದರು. ಮುಹಮ್ಮದ್‌ ಯುಬಿ ಕಾರ್ಯಕ್ರಮ ನಿರೂಪಿಸಿದರು. ಟ್ಯಾಲೆಂಟ್ ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಹಕೀಮ್ ಬಜಾಲ್, ಹುಸೈನ್ ಬಡಿಲ ಸಹಕರಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X