ಆಗಸ್ಟ್ ನಲ್ಲಿ ಶೇ.5.3ಕ್ಕಿಳಿದ ಚಿಲ್ಲರೆ ಹಣದುಬ್ಬರ
ಹೊಸದಿಲ್ಲಿ,ಸೆ.13: ಕಳೆದ ಜುಲೈನಲ್ಲಿ ಶೇ.5.59ರಷ್ಟಿದ್ದ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿರುವ ಚಿಲ್ಲರೆ ಹಣದುಬ್ಬರ ಆಗಸ್ಟ್ ನಲ್ಲಿ ಶೇ.5.3ಕ್ಕೆ ಇಳಿದಿದೆ.
ಹಣದುಬ್ಬರವು ಸತತ ಎರಡನೇ ತಿಂಗಳಿಗೆ ಆರ್ಬಿಐ ಬಯಸಿರುವ ಮಿತಿಯಲ್ಲಿಯೇ ಇದೆ.
ಸತತ ಎರಡು ತಿಂಗಳುಗಳ ಕಾಲ ಶೇ.6ರ ಮೇಲೆಯೇ ಇದ್ದ ಹಣದುಬ್ಬರ ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಬಳಿಕ ಪೂರೈಕೆಯಲ್ಲಿ ಸುಧಾರಣೆಯಾಗಿದ್ದರಿಂದ ಜುಲೈನಲ್ಲಿ ಇಳಿಕೆಯಾಗಿತ್ತು.
Next Story





