ಆದಿತ್ಯನಾಥ್ ರಿಂದ ‘ಅಬ್ಬಾ ಜಾನ್’ ಪದ ಪ್ರಯೋಗ: ಪ್ರತಿಪಕ್ಷಗಳ ಖಂಡನೆ
ಸಾಮಾಜಿಕ ತಾಣದಾದ್ಯಂತ ತಂದೆಯೊಂದಿಗಿನ ಫೋಟೊ ಹಾಕಿದ ಬಳಕೆದಾರರು

ಹೊಸದಿಲ್ಲಿ, ಸೆ. 13: ಮುಸ್ಲಿಂ ಸಮುದಾಯ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ವನ್ನು ಉದ್ದೇಶಿಸಿ ‘ಅಬ್ಬಾ ಜಾನ್’ ಎಂದು ಕರೆಯಲಾಗುವ ಈ ಜನರು’ ಎಂದು ವಾಗ್ದಾಳಿ ನಡೆಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ರಾಜಕೀಯ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ. ಈ ನಡುವೆ ಅಬ್ಬಾಜಾನ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಆದಿತ್ಯನಾಥ್ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಕೂಡ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಅವರು ಕೋಮವಾದಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದ್ದಾರೆ. ಕುಶಿನಗರದಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಆದಿತ್ಯನಾಥ್, 2017ಕ್ಕಿಂತ ಮುನ್ನ ಜನರು ಈಗಿನಂತೆ ಪಡಿತರ ಪಡೆಯುತ್ತಿರಲಿಲ್ಲ. ಆಗ ‘ಅಬ್ಬಾ ಜಾನ್’ ಎಂದು ಕರೆಯಲಾಗುತ್ತಿದ್ದ ಜನರು ಈ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದರು. ‘ಅಬ್ಬಾ ಜಾನ್’ ಪದ ಪ್ರಯೋಗಿಸಿದ ಆದಿತ್ಯನಾಥ್ ವಿರುದ್ಧ ಸೋಮವಾರ ಬಿಹಾರದ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿದೆ.
ಹಲವಾರು ಮಂದಿ ಟ್ವಿಟರ್ ನಲ್ಲಿ ಆದಿತ್ಯನಾಥ್ ರ ಈ ಪದಪ್ರಯೋಗವನ್ನು ವಿಭಿನ್ನ ರೀತಿಯಲ್ಲಿ ಬಳಸಿದ್ದಾರೆ. ಅಬ್ಬಾ ಜಾನ್ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ತಮ್ಮ ತಂದೆಯೊಂದಿಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Me and my #abbajaan who I address as “pappy”pic.twitter.com/VG5dk3GPTQ
— Shruti Seth (@SethShruti) September 13, 2021
I miss my Abbajaan. pic.twitter.com/4UOiEFLe4o
— Hansal Mehta (@mehtahansal) September 13, 2021
Missing my #abbajan. He left us in 2013. Taught me to have confidence in myself and follow my own beat. He and my mother brought us up to respect diverse traditions and cultures pic.twitter.com/8P5mtZQP4Y
— PatralekhaChatterjee পত্রলেখা চ্যাটার্জী (She/Her) (@patralekha2011) September 13, 2021







