Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇದು ಚರಿತ್ರೆಗೆ ಮಾಡುವ ಅಪಚಾರ

ಇದು ಚರಿತ್ರೆಗೆ ಮಾಡುವ ಅಪಚಾರ

ವಾರ್ತಾಭಾರತಿವಾರ್ತಾಭಾರತಿ14 Sept 2021 12:05 AM IST
share
ಇದು ಚರಿತ್ರೆಗೆ ಮಾಡುವ ಅಪಚಾರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದ ಏಳು ವರ್ಷಗಳಿಂದ ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದಿರುವ ಪಕ್ಷ ಮಾಡಬೇಕಾದ ಕೆಲಸವನ್ನು ಮಾಡುವುದನ್ನು ಬಿಟ್ಟು ಮಾಡಬಾರದ್ದನ್ನೆಲ್ಲ ಮಾಡುತ್ತಿದೆ.ಜನಕಲ್ಯಾಣದ ಯಾವುದೇ ಆರ್ಥಿಕ, ಸಾಮಾಜಿಕ ಕಾರ್ಯಕ್ರಮ ಈ ಸರಕಾರಕ್ಕಿಲ್ಲ.ಇದಕ್ಕಿರುವ ಮೊದಲ ಆದ್ಯತೆ ದೇಶದ ಚರಿತ್ರೆಯನ್ನು ಬದಲಿಸುವುದು ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಕೋಮುವಾದೀಕರಣಗೊಳಿಸುವುದು. ಆರೆಸ್ಸೆಸ್‌ನ ಹಿಂದುತ್ವ ಸಿದ್ಧಾಂತಕ್ಕೆ ಭಿನ್ನವಾದ ಧಾರೆಗಳನ್ನೆಲ್ಲ ಹೊಸಕಿ ಹಾಕಲು ಇದು ಹೊರಟಿದೆ. ಉದಾಹರಣೆಗೆ ದಿಲ್ಲಿ ವಿಶ್ವವಿದ್ಯಾನಿಲಯದ ಪಠ್ಯಕ್ರಮದಿಂದ ದಲಿತ ಲೇಖಕರ ಆತ್ಮಚರಿತ್ರೆಗಳನ್ನು ಕೈ ಬಿಡಲು ಇದು ಮುಂದಾಗಿದೆ. ಇಲ್ಲಿ ಕರ್ನಾಟಕದಲ್ಲಿ ಇದೇ ಪಕ್ಷದ ಸರಕಾರ ಹೊಸ ಧರ್ಮಗಳ ಉದಯದ ಪಠ್ಯವನ್ನು ತೆಗೆದು ಹಾಕಲು ಮಸಲತ್ತು ನಡೆಸಿದೆ. ಆ ಮೂಲಕ ವೈದಿಕಶಾಹಿಯ ವಿರುದ್ಧ ಬಂಡೆದ್ದ ಬೌದ್ಧ, ಜೈನ ಧರ್ಮಗಳ ಬಗ್ಗೆ ಅಧ್ಯಯನ ಮಾಡುವ ಅವಕಾಶ ಇನ್ನು ಮುಂದೆ ವಿದ್ಯಾರ್ಥಿಗಳಿಗಿಲ್ಲ. ಇದೆಲ್ಲಕ್ಕಿಂತ ಘನ ಘೋರವಾದ ಇನ್ನೊಂದು ಪ್ರಮಾದವೆಂದರೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬದಲಿಸ ಹೊರಟಿರುವುದಾಗಿದೆ.

 ಸಂಘಪರಿವಾರ ಮತ್ತು ಅದರ ರಾಜಕೀಯ ವೇದಿಕೆಯಾದ ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇತಿಹಾಸವಿಲ್ಲ. ಆವಾಗ ಅದೇನು ಮಾಡಿತು ಎಂಬುದು ಎಲ್ಲರಿಗೂ ತಿಳಿದ ವಿಷಯ. ತಾನು ಭಾಗವಹಿಸದ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಮನಬಂದಂತೆ ಬದಲಿಸಲು ಇದು ಹೊರಟಿದೆ. ಇವರಿಗೆ ಮಹಾತ್ಮಾ ಗಾಂಧೀಜಿ ಮತ್ತು ಜವಾಹರಲಾಲ್ ನೆಹರೂರನ್ನು ಕಂಡರೆ ಆಗುವುದಿಲ್ಲ. ಅಂತಲೇ ಅವರ ಹೆಸರುಗಳನ್ನೇ ಅಳಿಸಿ ಹಾಕಲು ಇದು ಹಿಂಜರಿಯುವುದಿಲ್ಲ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತಂತೆ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ(ಐಸಿಎಚ್‌ಆರ್) ಇತ್ತೀಚೆಗೆ ಸಿದ್ಧಪಡಿಸಿದ ಫೋಸ್ಟರ್‌ಗಳಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ಕೈ ಬಿಟ್ಟಿದೆ. ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರನ್ನು ಗೌರವಿಸುವ ಉದ್ದೇಶದಿಂದ ರೂಪಿಸಲಾದ ಭಿತ್ತಿಚಿತ್ರದಲ್ಲಿ ಮಹಾತ್ಮ ಗಾಂಧೀಜಿ, ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್, ಸಾವರ್ಕರ್, ಸುಭಾಷ್‌ಚಂದ್ರ ಬೋಸ್, ಮದನ ಮೋಹನ ಮಾಳವೀಯ ಮತ್ತು ಭಗತ್ ಸಿಂಗ್ ಅವರ ಭಾವಚಿತ್ರಗಳನ್ನು ಹಾಕಿ ನೆಹರೂ ಹೆಸರು ಕೈ ಬಿಟ್ಟಿದ್ದೇಕೆ? ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಮತ್ತು ಅವರ ಕುಟುಂಬದ ತ್ಯಾಗ ಅಸಮಾನ್ಯವಾದುದು. ಆಗರ್ಭ ಶ್ರೀಮಂತರಾಗಿದ್ದ ನೆಹರೂ ತಂದೆ ಮೋತಿಲಾಲ್ ನೆಹರೂ ತಮ್ಮ ಅಲಹಾಬಾದ್‌ನ ಭವ್ಯ ಮನೆಯನ್ನೇ ದೇಶಕ್ಕೆ ಅರ್ಪಿಸಿದರು. ಜವಾಹರಲಾಲ್ ನೆಹರೂ ಅನೇಕ ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಸ್ವಾತಂತ್ರಾನಂತರ ಆಧುನಿಕ ಭಾರತದ ನಿರ್ಮಾಣದಲ್ಲಿ ಇವರ ಪಾತ್ರವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಇಂತಹ ನೆಹರೂ ಭಾವಚಿತ್ರವನ್ನು ಕೈ ಬಿಟ್ಟ ಐಸಿಎಚ್‌ಆರ್ ತಾನು ಸ್ವತಂತ್ರ ಸಂಸ್ಥೆ ಎಂಬುದನ್ನು ಮರೆತು ಅಧಿಕಾರದಲ್ಲಿರುವವರನ್ನು ಒಲೈಸಲು ಹೊರಟಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಮಾತ್ರವಲ್ಲ ಮೌಲಾನಾ ಅಬುಲ್ ಕಲಾಂ ಆಝಾದ್‌ರಂತಹ ನಾಯಕರು ಮುಖ್ಯ ಪಾತ್ರ ವಹಿಸಿದ್ದರು. ಆಗ ಅತ್ಯಂತ ಹೆಚ್ಚು ವರ್ಷ ಸೆರೆಮನೆ ವಾಸ ಅನುಭವಿಸಿದವರು ಮೌಲಾನಾ ಆಝಾದ್. ಇಂತಹವರ ಭಾವಚಿತ್ರವನ್ನು ಹಾಕದಿರುವುದು ಕೂಡ ಚರಿತ್ರೆಗೆ ಮಾಡಿದ ಘೋರ ಅಪಚಾರವಾಗಿದೆ. ಈ ಭಿತ್ತಿಚಿತ್ರದಲ್ಲಿ ಒಬ್ಬರೇ ಒಬ್ಬ ಅಲ್ಪಸಂಖ್ಯಾತ ಮುಸ್ಲಿಂ ನಾಯಕರ ಭಾವಚಿತ್ರವಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ದಕ್ಷಿಣ ಭಾರತದ ಯಾವೊಬ್ಬ ನಾಯಕನ ಚಿತ್ರವೂ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಸರೋಜಿನಿ ನಾಯ್ಡು, ಅರುಣಾ ಅಸಫ್ ಅಲಿ ಅವರಂತಹ ನೂರಾರು ಮಹಿಳಾ ಹೋರಾಟಗಾರರು ಪಾಲ್ಗೊಂಡಿದ್ದರು. ಆದರೆ ಈ ಭಿತ್ತಿ ಚಿತ್ರದಲ್ಲಿ ಇವರ್ಯಾರ ಭಾವಚಿತ್ರವೂ ಇಲ್ಲ. ಬ್ರಿಟಿಷ್ ಸರಕಾರದ ಕ್ಷಮೆ ಕೇಳಿ ಬಿಡುಗಡೆಯಾಗಿ ಬಂದ ವ್ಯಕ್ತಿಯ ಭಾವಚಿತ್ರವನ್ನು ಅಳವಡಿಸಲು ಜಾಗವಿದೆ. ಆದರೆ ನೆಹರೂ, ಆಝಾದ್ ಚಿತ್ರವನ್ನು ಅಳವಡಿಸಲು ಜಾಗವಿಲ್ಲವೇ? ಬಹುತ್ವ ಭಾರತವನ್ನು ನಾಶ ಮಾಡಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ಹೇರಲು ಹೊರಟವರು ತಮ್ಮ ಸಂಘದ ಕಚೇರಿಗಳಲ್ಲಿ ಯಾರ ಭಾವಚಿತ್ರಗಳನ್ನಾದರೂ ಹಾಕಿಕೊಳ್ಳಲಿ, ಆದರೆ ಐಸಿಎಚ್‌ಆರ್‌ನಂತಹ ಸಂಸ್ಥೆಯಲ್ಲಿ ಇಂತಹ ಅಪಚಾರ ನಡೆಯಬಾರದು.

ಭಾರತದ ಸ್ವಾತಂತ್ರ್ಯ ಹೋರಾಟವೆಂದರೆ ಅದು ಯಾವುದೋ ಒಂದು ಪ್ರದೇಶದ ಇಲ್ಲವೇ ಸಮುದಾಯದ ಜನ ನಡೆಸಿರುವ ಹೋರಾಟವಲ್ಲ. ಈ ನೆಲದ ಎಲ್ಲ ಜನ ಸಮುದಾಯದ ಜನ, ಎಲ್ಲ ಪ್ರದೇಶದ ಜನ, ಎಲ್ಲ ಭಾಷೆಗಳ ಜನ ನಡೆಸಿರುವ ಹೋರಾಟ.ಇಂತಹ ಹೋರಾಟದ ಮುಂಚೂಣಿಯಲ್ಲಿದ್ದ ಜವಾಹರಲಾಲ್ ನೆಹರೂ ಸುಮಾರು ಹತ್ತು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದರು. ಸ್ವಾತಂತ್ರಾನಂತರ ದೇಶ ವಿಭಜನೆಯ ಕಾಲದಲ್ಲಿ ಭಾರತದ ಪ್ರಧಾನಿಯಾಗಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡು ಎಲ್ಲಾ ಜನ ಸಮುದಾಯಗಳ ಪ್ರೀತಿ ವಿಶ್ವಾಸವನ್ನು ಸಂಪಾದಿಸಿದರು. ಆದರೆ ಬಹುಮುಖಿ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕೋಮುವಾದಿ ಶಕ್ತಿಗಳ ಹುನ್ನಾರವನ್ನು ಅವರು ವಿರೋಧಿಸಿದರು. ಫ್ಯಾಶಿಸ್ಟ್ ಶಕ್ತಿಗಳ ಮಸಲತ್ತುಗಳನ್ನು ವಿಫಲಗೊಳಿಸಿದರು. ಆ ಕಾರಣಕ್ಕಾಗಿ ನೆಹರೂ ಮೇಲೆ ವಿಷ ಕಾರುವ ಈ ದುಷ್ಟ ಶಕ್ತಿಗಳು ಇತಿಹಾಸದಿಂದ ಅವರ ಹೆಸರನ್ನು ಅಳಿಸಿ ಹಾಕಲು ಹೊರಟಿವೆ.

ಪ್ರತಿ ಚುನಾವಣೆಯಲ್ಲಿ ಸೋತ ಪಕ್ಷ ಅಧಿಕಾರ ಕಳೆದುಕೊಂಡು ಗೆದ್ದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಪಕ್ಷಗಳು ಬದಲಾದರೂ ಸಂವಿಧಾನ ಬದ್ಧ ಸರಕಾರ ಎಂಬುದಿರುತ್ತದೆ. ಅಧಿಕಾರಕ್ಕೆ ಬಂದ ಪಕ್ಷ ತನ್ನ ಮೂಗಿನ ನೇರಕ್ಕೆ ಇತಿಹಾಸವನ್ನು ಬದಲಿಸಲು ಹುನ್ನಾರ ನಡೆಸುವುದು ಮತ್ತು ಐಸಿಎಚ್‌ಆರ್‌ನಂತಹ ಸಂಸ್ಥೆ ಆಡಳಿತ ಪಕ್ಷದ ಅಡಿಯಾಳಿನಂತೆ ವರ್ತಿಸುವುದು ಶೋಭೆ ತರುವುದಿಲ್ಲ. ಈ ಪ್ರಮಾದ ವ್ಯಾಪಕವಾಗಿ ಖಂಡನೆಗೆ ಗುರಿಯಾದ ನಂತರ ಮುಂದೆ ಇನ್ನಷ್ಟು ಭಿತ್ತಿಚಿತ್ರಗಳು ಬರಲಿವೆ, ಆಗ ನೆಹರೂ ಚಿತ್ರವನ್ನು ಅಳವಡಿಸುವುದಾಗಿ ಐಸಿಎಚ್‌ಆರ್ ಸಮಜಾಯಿಷಿ ನೀಡಿದೆ. ಆದರೆ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಮೊದಲ ಭಿತ್ತಿಪತ್ರದಲ್ಲಿ ನೆಹರೂ ಭಾವಚಿತ್ರವನ್ನು ಕೈ ಬಿಟ್ಟ ಈ ಸಂಸ್ಥೆಯ ಕ್ರಮದಿಂದ ತಪ್ಪು ಸಂದೇಶ ರವಾನೆಯಾಗಿದೆ. ಇನ್ನು ಮುಂದಾದರೂ ಇಂತಹ ಲೋಪ ಆಗದಂತೆ ಅಧಿಕಾರದಲ್ಲಿರುವವರು ಎಚ್ಚರ ವಹಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X