ಎಸ್.ಎಂ.ಎ. ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಎ.ಪಿ. ಇಸ್ಮಾಯಿಲ್ ಅಡ್ಯಾರ್ ಪದವು ಆಯ್ಕೆ

ಎ.ಪಿ. ಇಸ್ಮಾಯಿಲ್ / ಸಿದ್ದೀಕ್ ಸಅದಿ / ಬಶೀರ್ ಅಹ್ಮದ್
ಮಂಗಳೂರು: ಸುನ್ನೀ ಮ್ಯಾನೇಜ್ ಮೆಂಟ್ ಎಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ಮಹಾಸಭೆ ಇಲ್ಮ್ ಸೆಂಟರ್ ಪಡೀಲ್ ನಲ್ಲಿ ಜಿಲ್ಲಾಧ್ಯಕ್ಷ ಬಿ.ಎ.ಇಕ್ಬಾಲ್ ಕೃಷ್ಣಾಪು ಅವರ ನೇತೃತ್ವದಲ್ಲಿ ನಡೆಯಿತು.
ಎಸ್ ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ ಕಾಮಿಲ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ಎಂಎ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ವಿಷಯ ಮಂಡಿಸಿ ನೂತನ ಸಮಿತಿಗೆ ಚಾಲನೆ ನೀಡಿದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷ: ಎ.ಪಿ. ಇಸ್ಮಾಯಿಲ್ ಅಡ್ಯಾರ್ ಪದವು, ಪ್ರ.ಕಾರ್ಯದರ್ಶಿ: ಅಬೂಬಕರ್ ಸಿದ್ದೀಕ್ ಸಅದಿ ಬಾಳೆಪುಣಿ, ಕೋಶಾಧಿಕಾರಿ: ಬಶೀರ್ ಅಹ್ಮದ್ ಪಂಜಿಮೊಗರು, ಉಪಾಧ್ಯಕ್ಷ: ಎಸ್.ಎಸ್. ಮೂಸಾ ಹಾಜಿ ಸಂಬಾರತೋಟ, ಖಾಲಿದ್ ಹಾಜಿ ನ್ಯೂ ಪಡ್ಪು, ಬಾವ ಫಕ್ರುದ್ದೀನ್, ಅಬ್ದುರಹ್ಮಾನ್ ಸಂಪಿಲ, ಕಾರ್ಯದರ್ಶಿಗಳು: ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ಇಸ್ಮಾಯಿಲ್ ಸಖಾಫಿ, ಇಸ್ಮಾಯಿಲ್ ಕಿನ್ಯ, ರಝಾಖ್ ಹಾಜಿ ಕೈಕಂಬ, ಕಾರ್ಯಕಾರಿ ಸಮಿತಿ ಸದಸ್ಯರು: ಶಾಫಿ ಮದನಿ ಕುಪ್ಪೆಪದವು, ಉಮರುಲ್ ಫಾರೂಕ್ ಶೇಡಿಗುರಿ, ಎಂ.ಎ. ರಫೀಕ್ ಝುಹ್ರಿ ಮಂಚಿ, ಅಬ್ದುಲ್ಲತೀಫ್ ಬೋಳಿಯಾರ್, ರಫೀಕ್ ಎನ್.ಸಿ.ರೋಡ್, ಬದ್ರುದ್ದೀನ್ ಅಹ್ಸನಿ ಕೊಳಕ್ಕೆ, ಬಿ.ಎ.ಇಕ್ಬಾಲ್ ಕೃಷ್ಣಾಪುರ, ಅಬ್ದುಲ್ ಹಮೀದ್ ಬೆಂಗರೆ, ಅಶ್ರಫ್ ಕಾನ. ಸಿ.ಎಷ್. ಮುಹಮ್ಮದ್ ಹಾಜಿ ಬಾಳೆಪುಣಿ, ಕೆ.ಪಿ. ಅಬೂಬಕರ್ ಹಾಜಿ ಮೋಂಟುಗೋಳಿ, ಹೈದರ್ ಅಲಿ ಹಿಮಮಿ ಮುದುಂಗಾರುಕಟ್ಟೆ, ಟಿ.ಎಸ್. ಇಸ್ಮಾಯಿಲ್ ಹಾಜಿ ಉಳ್ಳಾಲ, ಬಾವುಚ್ಚ ಉಳ್ಳಾಲ, ಹನೀಫ್ ಸಅದಿ ಉಳ್ಳಾಲ, ಕಬೀರ್ ಅಹ್ಮದ್ ಜೆಪ್ಪು, ಎಂ.ಕೆ. ಅಬ್ಬಾಸ್ ಉರುಮಣೆ ಆಯ್ಕೆಯಾದರು.
ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿದರು. ಸಿದ್ದೀಕ್ ಸಅದಿ ವಂದಿಸಿದರು.





