ನಾವು ಅಧಿಕಾರಕ್ಕೆ ಬಂದಿರೋದು ರಸ್ತೆ, ಚರಂಡಿ ಮಾತ್ರ ಮಾಡೋದಕ್ಕೆ ಅಲ್ಲ: ಶಾಸಕ ಸಿಟಿ ರವಿ
ನಂಜನಗೂಡು ದೇಗುಲ ತೆರವು ವಿಚಾರ

ಬೆಂಗಳೂರು: 'ಮೈಸೂರಿನ ನಂಜನಗೂಡಿನ ಪುರಾತನ ದೇವಸ್ಥಾನ ತೆರವುಗೊಳಿಸಿದ್ದ ಕ್ರಮ ದುಃಖ ತಂದಿದೆ. ನಮಗೂ ಭಾವನೆಗಳಿವೆ, ನಾವು ಅಧಿಕಾರಕ್ಕೆ ಬಂದಿರೋದು ರಸ್ತೆ, ಚರಂಡಿ ಮಾತ್ರ ಮಾಡೋದಕ್ಕೆ ಅಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನ್ಯಾಯಾಲಯಗಳ ತೀರ್ಪನ್ನು ಅನುಷ್ಠಾನ ಮಾಡಲು ಗೌರವಯುತ ಮಾರ್ಗಗಳಿವೆ. ತೆರವು ಕಾರ್ಯವನ್ನು ತಡೆಯುವುದಕ್ಕೆ ಸಾಧ್ಯ ಇದೆ ಎಂದ ಅವರು, ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕೆಲವೊಂದು ವಿಚಾರಗಳನ್ನು ಸಾರ್ವಜನಿಕವಾಗಿ ಮಾತನಾಡಲು ಆಗಲ್ಲ' ಎಂದು ತಿಳಿಸಿದರು.
Next Story





