ಗುಜರಿ ವಸ್ತುಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ನಿರ್ಮಿಸಿದ ತಂದೆ-ಮಗ ಜೋಡಿ

Photo: Indiatoday
ಬೆಂಗಳೂರು: ಆಂಧ್ರಪ್ರದೇಶದ ಗುಂಟೂರಿನಲ್ಲಿ ನೆಲೆಸಿರುವ ತಂದೆ-ಮಗ ಜೋಡಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ಪ್ರತಿಮೆಯನ್ನು ಸಂಪೂರ್ಣವಾಗು ಗುಜರಿ ವಸ್ತುಗಳನ್ನೇ ಬಳಸಿ ನಿರ್ಮಿಸಲಾಗಿದೆ ಎನ್ನುವುದು ವಿಶೇಷವಾಗಿದೆ. ಪ್ರತಿಮೆ 14 ಅಡಿ ಉದ್ದವಿದೆ. ಕರ್ನಾಟಕದ ಬೆಂಗಳೂರಿನ ಉದ್ಯಾನವನದಲ್ಲಿ ಬಿಜೆಪಿ ಕಾರ್ಪೊರೇಟರ್ ಮೋಹನ್ ರಾಜು ಇದನ್ನು ಸ್ಥಾಪಿಸಲಿದ್ದಾರೆ ಎಂದು indiatoday ವರದಿ ಮಾಡಿದೆ.
ಗುಂಟೂರಿನ ತೆನಾಲಿ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಹಾಗೂ ಅವರ ಪುತ್ರ ಕೆ. ರವಿ ಸೇರಿಕೊಂಡು ಎರಡು ತಿಂಗಳುಗಳ ಹಿಂದೆ ಪ್ರತಿಮೆ ನಿರ್ಮಾಣವನ್ನು ಪ್ರಾರಂಭಿಸಿದ್ದರು. ಒಂದು ಟನ್ ಗಿಂತಲೂ ಹೆಚ್ಚಿನ ಆಟೊಮೊಬೈಲ್ ತ್ಯಾಜ್ಯಗಳನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಈ ಗುಜರಿ ವಸ್ತುಗಳನ್ನು ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ ಮತ್ತು ಗುಂಟೂರಿನ ಗುಜರಿ ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story





