ಉಡುಪಿ: ಕ್ಷಯ ಮುಕ್ತ ಗ್ರಾಮ ಕಾರ್ಯಕ್ರಮ ಉದ್ಘಾಟನೆ
ಉಡುಪಿ, ಸೆ.14: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಉಡುಪಿ, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುರ್ಕಾಲು ಗ್ರಾಪಂ ಇವುಗಳ ಸಹಯೋಗದೊಂದಿಗೆ ‘ಕ್ಷಯ ಮುಕ್ತ ಗ್ರಾಮ’ ಕಾರ್ಯಕ್ರಮವನ್ನು ಕುರ್ಕಾಲು ಗ್ರಾಪಂ ಅಧ್ಯಕ್ಷೆ ವಸಂತ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುರ್ಕಾಲು ಗ್ರಾಮದ 1200 ಮನೆಗಳಿಗೆ ಭೇಟಿ ನೀಡಿ ಪ್ರತೀ ಮನೆಯ ಸದಸ್ಯರಿಗೆ ಕ್ಷಯ ರೋಗದ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂನ ಉಪಾಧ್ಯಕ್ಷರು, ಪಿಡಿಓ, ಸಂಪನ್ಮೂಲ ವ್ಯಕ್ತಿ ಮಂಜುನಾಥ ಗಾಣಿಗ, ವೈದ್ಯಾಧಿಕಾರಿ ಡಾ. ಶೈನಿ ಉಪಸ್ಥಿತರಿದ್ದರು. ಸುರೇಶ್ ಕೆ ಸಾಲಿಗ್ರಾಮ ನಿರೂಪಿಸಿ, ಕೃಷ್ಣ ಶೆಟ್ಟಿ ವಂದಿಸಿದರು.
Next Story





