ಉಡುಪಿ: ಮಂಗಳವಾರ 57 ಮಂದಿಗೆ ಕೊರೋನ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಉಡುಪಿ, ಸೆ.14: ಮಂಗಳವಾರ ಜಿಲ್ಲೆಯಲ್ಲಿ 57 ಮಂದಿ ಮಾತ್ರ ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1559ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಸೋಂಕು ದೃಢಪಟ್ಟ 57 ಮಂದಿಯಲ್ಲಿ 29 ಮಂದಿ ಪುರುಷರು ಹಾಗೂ 28 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 37 ಮಂದಿ ಉಡುಪಿ ತಾಲೂಕು, 11 ಮಂದಿ ಕುಂದಾಪುರ ಹಾಗೂ 8 ಮಂದಿ ಕಾರ್ಕಳ ತಾಲೂಕಿನವರು. ಒಬ್ಬರು ಹೊರಜಿಲ್ಲೆ ಯವರೂ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ 11 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 46 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಸೋಮವಾರ 12 ಮಂದಿ ಮಾತ್ರ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 73,241ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3815 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 75,259ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,57,046 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ.
7369 ಮಂದಿಗೆ ಲಸಿಕೆ ವಿತರಣೆ: ಜಿಲ್ಲೆಯಲ್ಲಿ ಮಂಗಳವಾರ 7369 ಮಂದಿ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 2869 ಮಂದಿ ಮೊದಲ ಡೋಸ್ ಹಾಗೂ 4500 ಮಂದಿ ಎರಡನೇ ಡೋಸ್ನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
18ರಿಂದ 44ವರ್ಷದೊಳಗಿನ 1903 ಮಂದಿ ಮೊದಲ ಹಾಗೂ 1871 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 966 ಮಂದಿಗೆ ಮೊದಲ ಹಾಗೂ 2629 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
18ರಿಂದ 44ವರ್ಷದೊಳಗಿನ 1903 ಮಂದಿ ಮೊದಲ ಹಾಗೂ 1871 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 966 ಮಂದಿಗೆ ಮೊದಲ ಹಾಗೂ 2629 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಮಂಗಳವಾರ ಸಂಜೆಯವರೆಗೆ ಜಿಲ್ಲೆಯಲ್ಲಿ ಒಟ್ಟು 8,40,373 ಮಂದಿ ಮೊದಲ ಡೋಸ್ನ್ನು ಪಡೆದರೆ, 3,24,513 ಮಂದಿ ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದಾರೆ.
ಮಂಗಳವಾರ ಸಂಜೆಯವರೆಗೆ ಜಿಲ್ಲೆಯಲ್ಲಿ ಒಟ್ಟು 8,40,373 ಮಂದಿ ಮೊದಲ ಡೋಸ್ನ್ನು ಪಡೆದರೆ, 3,24,513 ಮಂದಿ ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದಾರೆ.
ಸೆ.15ರಂದು ಲಸಿಕೆ ಲಭ್ಯತೆ ವಿವರ
ಬುಧವಾರ ಸೆ.15ರಂದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ಲಭ್ಯವಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು.
ಉಡುಪಿ ನಗರ ಪ್ರದೇಶದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-150, ಪೆರಂಪಳ್ಳಿ ಇನ್ಫಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್- 350, ಪುತ್ತೂರು ಎಲ್ವಿಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-250 ಹಾಗೂ ಉಡುಪಿ ಶಿರಿಬೀಡು ಸರಸ್ವತಿ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-300 ಲಭ್ಯವಿದೆ.
ನಗರದ ಸರಕಾರಿ ತಾಯಿ ಮತ್ತು ಮಕ್ಕಳ (ಬಿಆರ್ಎಸ್) ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್- 250 ಲಭ್ಯವಿದೆ. ಅಲ್ಲದೇ ಅ.10ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳ ಗಡುವು ಮೀರಿದವರಿಗೆ ಎರಡನೇ ಡೋಸ್ ಲಸಿಕೆ.ನ್ನು ಇಲ್ಲೇ ಪಡೆಯಬಹುದು ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.







