ಚಿಕ್ಕಮಗಳೂರು: ಹಿರಿಯ ವ್ಯಕ್ತಿ ನಾಪತ್ತೆ

ಉಡುಪಿ, ಸೆ.14: ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ಪುರ ಸಣ್ಣಪ್ಪನ ಮಠ ಹಿಳುವಳ್ಳಿ ನಿವಾಸಿ ತಿಮ್ಮಪ್ಪ ತಿಮ್ಮಗೌಡ (65) ಎಂಬವರು ಸಾಸ್ತಾನದ ಗುಂಡ್ಮಿ ಗ್ರಾಮದ ತಮ್ಮ ಮಗನ ಮನೆಯಿಂದ 2017 ಜು.6ರಂದು ಊರಿಗೆಂದು ಹೊರಟು ಕಾಣೆಯಾಗಿರುತ್ತಾರೆ.
ಚಹರೆ: 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಶರೀರ, ಎದುರು ಭಾಗದ ದಂತ ಪಂಕ್ತಿಯಲ್ಲಿ ಒಂದು ಹಲ್ಲು ಇರುವುದಿಲ್ಲ. ತಲೆಯ ಮಧ್ಯಭಾಗದಲ್ಲಿ ಕೂದಲು ಇರುವುದಿಲ್ಲ, ಬಿಳಿ ಬಣ್ಣದ ಜರಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ.
ಈ ವ್ಯಕ್ತಿ ಪತ್ತೆಯಾಗಿದ್ದಲ್ಲಿ ಕೋ ಪೋಲಿಸ್ ಠಾಣೆ ದೂ.ಸಂ: 0820-2564155, 9480805454 ಹಾಗೂ ಪೋಲಿಸ್ ವೃತ್ತ ನಿರೀಕ್ಷಕರ ಕಛೇರಿ ಬ್ರಹ್ಮಾವರ ದೂ.ಸಂ: 0820-2561966, 9480805432 ನ್ನು ಸಂಪರ್ಕಿಸುವಂತೆ ಬ್ರಹ್ಮಾವರ ಪೋಲಿಸ್ ವೃತ್ತ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story





