Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದೇರಳಕಟ್ಟೆ: ಬಿಗ್ ಆ್ಯಪಲ್ ವೆಂಚರ್ಸ್ ನ...

ದೇರಳಕಟ್ಟೆ: ಬಿಗ್ ಆ್ಯಪಲ್ ವೆಂಚರ್ಸ್ ನ 'ದ ಲಗೂನ್ ಮಾಲ್‌'ಗೆ ಶಿಲಾನ್ಯಾಸ

ವಾರ್ತಾಭಾರತಿವಾರ್ತಾಭಾರತಿ15 Sept 2021 4:10 PM IST
share
ದೇರಳಕಟ್ಟೆ: ಬಿಗ್ ಆ್ಯಪಲ್ ವೆಂಚರ್ಸ್ ನ ದ ಲಗೂನ್ ಮಾಲ್‌ಗೆ ಶಿಲಾನ್ಯಾಸ

ಮಂಗಳೂರು, ಸೆ.15: ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆಯ ವತಿಯಿಂದ ಶಿಕ್ಷಣ ಮತ್ತು ಮೆಡಿಕಲ್ ಹಬ್ ಎಂದೇ ಗುರುತಿಸಲ್ಪಟ್ಟಿರುವ ದೇರಳಕಟ್ಟೆಯ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳಲಿರುವ 'ದ ಲಗೂನ್ ಮಾಲ್‌'ಗೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆಯ ಮಾಲಕ ಹಾಜಿ ಟಿ.ಎಂ.ಶರೀಫ್ ಶಿಲಾನ್ಯಾಸ ನೆರವೇರಿಸಿದರು. ಕೃಷ್ಣಾಪುರ ಖಾಝಿ ಅಲ್ಹಾಜ್ ಇ.ಕೆ.ಇಬ್ರಾಹೀಂ ಮುಸ್ಲಿಯಾರ್ ದುಆಗೈದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಳಂಗಡಿ ಹವ್ವಾ ಜುಮಾ ಮಸ್ಜಿದ್‌ನ ಖತೀಬ್ ಸೈಯದ್ ಯಹ್ಯಾ ತಂಙಳ್, ಕೇವಲ ಪ್ರಾರ್ಥನೆಯಿಂದ ಮಾತ್ರ ಯಾವುದೂ ಸಿದ್ಧಿಸದು. ಅದಕ್ಕೆ ಒಳ್ಳೆಯ ಉದ್ದೇಶ, ಗುರಿ ಬೇಕು. ಜೊತೆಗೆ ಕರ್ಮಗಳನ್ನು ಹೆಚ್ಚಿಸಬೇಕು. ಶಕ್ತಿ ಮೀರಿ ಶ್ರಮಿಸಬೇಕು. ಈ ಸಂಸ್ಥೆಯ ಪ್ರವರ್ತಕರು ಶ್ರಮಿಕರಾಗಿದ್ದು, ಹೊಸ ಕನಸಿನೊಂದಿಗೆ ಆರಂಭಿಸಲಾದ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸಿದರು.

'ದ ಲಗೂನ್‌ ಮಾಲ್‌'ನ ಬ್ರೋಶರ್ ಬಿಡುಗಡೆಗೊಳಿಸಿ ಮಾತನಾಡಿದ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ಈ ಸಂಸ್ಥೆಯ ಪಾಲುದಾರರು ಸದಾ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಸಮಾಜಕ್ಕೆ ಅವರು ಸಾಕಷ್ಟು ಕೊಡುವಾಗ ಸಮಾಜವೂ ಅವರ ಯೋಜನೆಗಳಲ್ಲಿ ಕೈ ಜೋಡಿಸಬೇಕಿದೆ ಎಂದರು.

ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಮನ್ಸೂರ್ ಅಹ್ಮದ್ ಆಝಾದ್, ಅಬ್ಬಾಸ್ ಉಚ್ಚಿಲ, ಹಾಜಿ ಹಸನಬ್ಬ ಜೆಪ್ಪು, ಅಪ್ಸರಾ ಸಾರೀಸ್‌ನ ಸಂಶುದ್ದೀನ್ , ಅಬ್ದುಲ್ ಹಮೀದ್ ಕಾನ, ಕೆ.ಎಚ್.ಮುಹಮ್ಮದ್ ಸೂರಿಂಜೆ, ಹನೀಫ್ ಸೂರಿಂಜೆ, ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಜಲೀಲ್ ಬದ್ರಿಯಾ, ಎಂ.ಎ.ಎಸ್. ಆಸಿಫ್ ತೋಡಾರ್, ಬೆಳ್ಮ ಗ್ರಾಪಂ ಉಪಾಧ್ಯಕ್ಷೆ ರಮ್ಲತ್, ಶೇಕಬ್ಬ ಕಾವೂರು ಮಾಝ್ ಇನ್ಫೋಟೆಕ್‌ನ ಮಾಲಕ ಕಳವಾರು ಮುಹಮ್ಮದ್, ಎಸ್‌.ಕೆ. ಅಸೋಸಿಯೇಶನ್‌ನ ಆರ್ಕಿಟೆಕ್ ಇಂಜಿನಿಯರ್ ಸುರೇಶ್ ಕುಮಾರ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆಯ ಪಾಲುದಾರರಾದ ತನ್ವೀರ್ ಅಹ್ಮದ್, ತಸ್ಲೀಂ ಅಹ್ಮದ್, ಮುನೀರ್ ಅಹ್ಮದ್ ಉಪಸ್ಥಿತರಿದ್ದರು.

ಎಂ.ಫ್ರೆಂಡ್ಸ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹೀಗೆ ಏಶ್ಯ ಖಂಡದ ಎಲ್ಲೂ ಇಲ್ಲ ಕಾಲೇಜು ಆಸ್ಪತ್ರೆಗಳು ದೇರಳಕಟ್ಟೆಯಲ್ಲಿವೆ. ಇಂತಹ ದೇರಳಕಟ್ಟೆಯ ಹೃದಯಭಾಗದಲ್ಲಿ 'ದ ಲಗೂನ್ ಮಾಲ್' ಕೇವಲ 18 ತಿಂಗಳ ಅವಧಿಯೊಳಗೆ ನಿರ್ಮಾಣಗೊಳ್ಳುವ ಗುರಿಯನ್ನು ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆ ಹಾಕಿಕೊಂಡಿವೆ.

 ತಳ ಅಂತಸ್ತು, ನೆಲ ಅಂತಸ್ತು, ಮೊದಲ ಮತ್ತು ದ್ವಿತೀಯ ಮಹಡಿ ಹೀಗೆ ನಾಲ್ಕು ಸ್ತರಗಳಲ್ಲಿ 'ದ ಲಗೂನ್ ಮಾಲ್' ತಲೆಯೆತ್ತಲಿದೆ. ಸುಸಜ್ಜಿತ ಮಾದರಿಯ ಅಂತರ್ ರಾಷ್ಟ್ರೀಯ ಬ್ರಾಂಡ್‌ನ ಮಳಿಗೆಗಳಿಗೆ ಪೂರಕವಾದ ಈ ಮಾಲ್ ಒಟ್ಟು 23 ಸಾವಿರ ಚ.ಅ.ವಿಸ್ತೀರ್ಣ ಹೊಂದಿರಲಿದೆ. ತಳ ಅಂತಸ್ತಿನಲ್ಲಿ 2330 ಚದರ ಅಡಿಯ 5 ಮಳಿಗೆ, ನೆಲ ಅಂತಸ್ತಿನಲ್ಲಿ 5,900 ಚ.ಅ.ಯ 15 ಮಳಿಗೆ, ಮೊದಲ ಮಹಡಿಯಲ್ಲಿ 6,570 ಚ. ಅಡಿಯ 18 ಮಳಿಗೆ, ದ್ವಿತೀಯ ಮಹಡಿಯಲ್ಲಿ 6610 ಚ.ಅಡಿಯ 19 ಮಳಿಗೆಗಳು ನಿರ್ಮಾಣಗೊಳ್ಳಲಿವೆ. ಗ್ರಾಹಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೂ ಇರಲಿದೆ.

ಆರ್ಕಿಟೆಕ್ ಇಂಜಿನಿಯರ್ ಎಸ್‌ಕೆ ಅಸೋಸಿಯೇಟ್ಸ್‌ನ ಸುರೇಶ್ ಕುಮಾರ್, ಸ್ಟ್ರಕ್ಚರ್ ಇಂಜಿನಿಯರ್ ಆಗಿ ಆನಂದ ಭಟ್, ನಿರ್ಮಾಣದ ಜವಾಬ್ದಾರಿಯನ್ನು ಮಾಝ್ ಇನ್‌ಫ್ರಾಟೆಕ್‌ನ ಮಾಲಕ ಕಳವಾರು ಮುಹಮ್ಮದ್ ವಹಿಸಲಿದ್ದಾರೆ. ದ ಲಗೂನ್ ನಲ್ಲಿ ಮಳಿಗೆಗಳನ್ನು ಹೊಂದಲು ಬಯಸುವವರು ಮೊ.ಸಂ: 7760291928ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪಾಲುದಾರ ತನ್ವೀರ್ ಅಹ್ಮದ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X