ಮಂಗಳೂರು: ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಸಿಎಫ್‌ಐ ಪ್ರತಿಭಟನೆ

ಮಂಗಳೂರು, ಸೆ.15: ಹೊಸ ರಾಷ್ಟ್ತ್ರೀಯ ಶಿಕ್ಷಣ ನೀತಿ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಹಾಗೂ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಎಫ್‌ಐ ಕಾರ್ಯಕರ್ತರು ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಸಿಎಫ್‌ಐ ಮಂಗಳೂರು ನಗರದ ಅಧ್ಯಕ್ಷ ಇನಾಯತ್ ಅಲಿ ಮಾತನಾಡಿ, ಲಾಠಿ ಏಟಿನ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಫ್ಯಾಶಿಸ್ಟ್ ಸರಕಾರದ ಪ್ರಯತ್ನವು ಮೂರ್ಖತನವಾಗಿದೆ. ಎನ್‌ಇಪಿ ವಿರುದ್ಧವಾಗಿ ವಿದ್ಯಾರ್ಥಿಗಳ ಹೋರಾಟ ಇನ್ನಷ್ಟು ಶಕ್ತಗೊಳ್ಳಲಿದೆ ಎಂದು ಹೇಳಿದರು
ಈ ಸಂದರ್ಭ ಸಿಎಫ್‌ಐ ಜಿಲ್ಲಾ ನಾಯಕಿ ಅಫ್ರಾ, ಮಂಗಳೂರು ನಗರ ಕಾರ್ಯದರ್ಶಿ ಮುನೀರ್ ಬಜಾಲ್ ಮತ್ತಿತರರು ಪಾಲ್ಗೊಂಡಿದ್ದರು.
Next Story









