ಮಂಗಳೂರು: ಸಿಟಿ ಗೋಲ್ಡ್‌ನ 'ಮೆಹರ್ ವೆಡ್ಡಿಂಗ್, ಕಸ್ಟಮೈಸ್ಡ್ ಕಲೆಕ್ಷನ್' ಪ್ರದರ್ಶನ-ಮಾರಾಟಕ್ಕೆ ಚಾಲನೆ
ಮೆಹರ್ ಮಲ್ಹರ್, ಮೆಹರ್ ವಿಂಟೇಜ್ ಉದ್ಘಾಟನೆ

ಮಂಗಳೂರು, ಸೆ.15: ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ 'ಸಿಟಿ ಗೋಲ್ಡ್' ಮೆಹರ್ ವೆಡ್ಡಿಂಗ್ ಕಲೆಕ್ಷನ್ ಪ್ರಯುಕ್ತ ಆಯೋಜಿಸಿರುವ 'ಮೆಹರ್ ವೆಡ್ಡಿಂಗ್, ಕಸ್ಟಮೈಸ್ಡ್ ಕಲೆಕ್ಷನ್'ನ ಪ್ರದರ್ಶನ-ಮಾರಾಟಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ 'ಮೆಹರ್ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್ ಶೋರೂಮ್' ಹಾಗೂ ಹಿದಾಯ ಫೌಂಡೇಶನ್‌ನ ಟ್ರಸ್ಟಿ, ಉದ್ಯಮಿ ಝಿಯಾವುದ್ದೀನ್ ಅಹ್ಮದ್ 'ಮೆಹರ್ ಮಲ್ಹರ್' ಶೋ ರೂಮ್ ಉದ್ಘಾಟಿಸಿ ಶುಭ ಹಾರೈಸಿದರು.
ಮಕ್ಕಳ ಆಟವಾಡುವ ಸ್ಥಳವನ್ನು ಮಂಗಳೂರಿನ ಬಾಲಕ ಬ್ಲಾಗರ್ ಕೆ. ಅಮೀರ್ ಯೂಸುಫ್ ಉದ್ಘಾಟಿಸಿದರು.
ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಮಾತನಾಡಿ ಸಿಟಿ ಗೋಲ್ಡ್ ಚಿನ್ನ ಮತ್ತು ವಜ್ರಾಭರಣಗಳ ಮಳಿಗೆಯು ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಮುಂದೆಯೂ ಗ್ರಾಹಕರಿಗೆ ಪ್ರಾಮಾಣಿಕ ಸೇವೆಯನ್ನು ನೀಡುವ ಮೂಲಕ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದರು.
ಮುಖ್ಯ ಅತಿಥಿಗಳಾಗಿ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಮುನ್ನೂರು ಗ್ರಾಪಂ ಸದಸ್ಯ ಹಾಗೂ ಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಅಝೀಝ್ ಆರ್‌ಕೆಸಿ ಭಾಗವಹಿಸಿದ್ದರು. ಸಿಟಿ ಗೋಲ್ಡ್ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಮತ್ತಿತರರು ಉಪಸ್ಥಿತರಿದ್ದರು.
ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು (ಐಸಿಎಐ) ನಡೆಸಿದ ರಾಷ್ಟ್ರಮಟ್ಟದ ಸಿ.ಎ. ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ಅವರನ್ನು ಸನ್ಮಾನಿಸಲಾಯಿತು.
ಮೆಹರ್ ಕಸ್ಟಮೈಸ್ಡ್ ವೆಡ್ಡಿಂಗ್ ಕಲೆಕ್ಷನ್ ಪ್ರದರ್ಶನ-ಮಾರಾಟದ ಪ್ರಯುಕ್ತ ಏರ್ಪಡಿಸಲಾದ ಲಕ್ಕಿಡ್ರಾದಲ್ಲಿ ವಿಜೇತರಾದ ಸಫೀನಾ ಮಂಗಳೂರು ಅವರಿಗೆ ಬಹುಮಾನ ನೀಡಲಾಯಿತು.
ಅಕ್ಟೋಬರ್ 31ರವರೆಗೆ ನಡೆಯುವಈ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಮೆಹರ್ ವೆಡ್ಡಿಂಗ್ ಕಲೆಕ್ಷನ್ ಪ್ರಯುಕ್ತ ಮೆಹರ್ ವೆಡ್ಡಿಂಗ್ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು. ಗ್ರಾಹಕರ ಬಜೆಟ್ ಅನುಸಾರವಾಗಿ ಆಭರಣಗಳನ್ನು ನೀಡಲಾಗುವುದು. ಟ್ರೆಡಿಶನಲ್, ಆಂಟಿಕ್, ಕಲ್ಕತ್ತಾ ವಿಂಟೇಜ್ ಆಭರಣಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನದ ಪ್ರಯುಕ್ತ ಮೇಕಿಂಗ್ ಚಾರ್ಜ್‌ನ ಮೇಲೆ ಕಡಿತ ನೀಡಲಾಗುವುದೆಂದು ಸಿಟಿ ಗೋಲ್ಡ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.

















