ಸ್ಲೋಗನ್ ಬರೆಯುವ ಸ್ಪರ್ಧೆ
ಉಡುಪಿ, ಸೆ.15: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ, ಒಡಿಎಫ್ ಪ್ಲಸ್‌ನ ವಿವಿಧ ಘಟಕಗಳ ಬಗ್ಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಆಕರ್ಷಕ ಸ್ಲೋಗನ್ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕನಿಷ್ಠ 15ರಿಂದ 20ರಷ್ಟು ಆಕರ್ಷಕ ಸ್ಲೋಗನ್‌ಗಳನ್ನು ಊರಿನ ಪ್ರಮುಖ ಸಾರ್ವಜನಿಕ ಪ್ರದೇಶಗಳಾದ ಗ್ರಾಮಪಂಚಾಯತ್ ಕಚೇರಿ, ಶಾಲೆ, ಸಮುದಾಯ ಸಂಕೀರ್ಣಗಳು, ಮಾರುಕಟ್ಟೆ, ಸಂತೆ ನಡೆಯುವ ಸ್ಥಳ, ಬಸ್ ನಿಲ್ದಾಣಗಳಲ್ಲಿ, ಘನ ತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಮಲ ತ್ಯಾಜ್ಯ ನಿರ್ವಹೆ ಕುರಿತಂತೆ ಬರೆಯಬೇಕಾಗುತ್ತದೆ.
ಸ್ಲೋಗನ್‌ಗಳನ್ನು ಬರೆದು, ಸೆಪ್ಟಂಬರ್ 20ರೊಳಗೆ, ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ಪಂಚಾಯತ್, ರಜತಾದ್ರಿ, ಉಡುಪಿ ಈ ವಿಳಾಸಕ್ಕೆ ಹಾರ್ಡ್ ಪ್ರತಿ ಇಲ್ಲವೇ ಈಮೇಲ್- zpudupi@gmail.com - ಗೆ ಕಳುಹಿಸುವಂತೆ ಸೂಚಿಸಲಾಗಿದೆ.
ಆಕರ್ಷಕ ಸ್ಲೋಗನ್ ಬರೆದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಉಡುಪಿ ಜಿಪಂ ಕಚೇರಿ ಅಥವಾ ದೂ.ಸಂಖ್ಯೆ.0820-2574945ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







