ನಟ ಸೋನು ಸೂದ್ ಮನೆಗೆ ತೆರಳಿ ತನಿಖೆ ನಡೆಸಿದ ಐಟಿ ಅಧಿಕಾರಿಗಳು
ಹೊಸದಿಲ್ಲಿ: ನಟ ಸೋನು ಸೂದ್ ಅವರ ಕಛೇರಿಗಳ ಮೇಲಿನ ದಾಳಿ ಕಳೆದ ರಾತ್ರಿ ಮುಗಿದ ನಂತರ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಮುಂಬೈನಲ್ಲಿರುವ ಅವರ ಮನೆಗೆ ಆಗಮಿಸಿದರು. ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದಿಗಿನ ಆಸ್ತಿ ಒಪ್ಪಂದದ ಬಗ್ಗೆ ತೆರಿಗೆ ಅಧಿಕಾರಿಗಳು ಸೋನು ಅವರನ್ನು ತನಿಖೆ ನಡೆಸುತ್ತಿದ್ದಾರೆ.
ಅಧಿಕಾರಿಗಳು ಬುಧವಾರ ಜುಹುದಲ್ಲಿನ ನಟನ ಮನೆಯಲ್ಲಿರುವ ಅವರ ಚಾರಿಟಿಯ ಕಚೇರಿ ಸೇರಿದಂತೆ ನಟನಿಗೆ ಸಂಬಂಧಿಸಿದ ಆರು ಸ್ಥಳಗಳನ್ನು ಶೋಧಿಸಿದ್ದರು,.
"ಸೋನು ಸೂದ್ ಅವರ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದವು ಪರಿಶೀಲನೆಯಲ್ಲಿದೆ. ಈ ಒಪ್ಪಂದದಲ್ಲಿ ತೆರಿಗೆ ವಂಚನೆಯ ಆರೋಪದ ಮೇಲೆ ಸಮೀಕ್ಷೆಯನ್ನು ಆರಂಭಿಸಲಾಗಿದೆ" ಎಂದು ಮೂಲಗಳು ತಿಳಿಸಿದ್ದು, ಕಾರ್ಯಾಚರಣೆಯನ್ನು "ಸಮೀಕ್ಷೆ" ಎಂದು ಕರೆದಿದೆ.
ಸೋನು ಸೂದ್ ಅವರು ನೂರಾರು ವಲಸಿಗರು ಲಾಕ್‌ಡೌನ್‌ನಲ್ಲಿ ಸಿಲುಕಿದ್ದಾಗ, ಅಸಹಾಯಕರಾಗಿದ್ದಾಗ ಅವರ ಸ್ವಂತ ರಾಜ್ಯಕ್ಕೆ ಕರೆದೊಯ್ಯಲು ಬಸ್ಸುಗಳು, ರೈಲುಗಳು ಹಾಗೂ ವಿಮಾನಗಳ ವ್ಯವಸ್ಥೆ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಎರಡನೇ ಅಲೆಯ ವೇಳೆ ಅವರು ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸಿದ್ದರು.