ಸೆ.18-19: ಉಡುಪಿ ಜಿಲ್ಲೆಯ 10 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
ಉಡುಪಿ, ಸೆ.16: ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸೆ.18ರ ಶನಿವಾರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು ಒಟ್ಟು 264 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.
ಮರುದಿನ ಸೆ.19ರ ರವಿವಾರದಂದು ಸ್ಪರ್ಧಾತ್ಮಕ ಪರೀಕ್ಷೆಯು ಉಡುಪಿ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಇದರಲ್ಲಿ ಒಟ್ಟು 2490 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ.
1.ಮಣಿಪಾಲ ಪದವಿ ಪೂರ್ವ ಕಾಲೇಜು, ಮಣಿಪಾಲ, 2.ಟಿ.ಎ.ಪೈ ಆಂಗ್ಲ ಮಾದ್ಯಮ ಶಾಲೆ ಕುಂಜಿಬೆಟ್ಟು ಉಡುಪಿ, 3.ಯು. ಕಮಲಾಬಾಯಿ ಪ್ರೌಢ ಶಾಲೆ ಕಡಿಯಾಳಿ, 4.ಪೂರ್ಣಪ್ರಜ್ಞ ಪಿ.ಯು.ಕಾಲೇಜು ಉಡುಪಿ, 5. ಪೂರ್ಣ ಪ್ರಜ್ಞ ಪದವಿ ಕಾಲೇಜು ಉಡುಪಿ, 6.ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ, 7.ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ, 8.ಸೈಂಟ್ ಸಿಸಿಲಿಸ್ ಪ್ರೌಢ ಶಾಲೆ ಬ್ರಹ್ಮಗಿರಿ ಉಡುಪಿ, 9.ಆದಿ ಉಡುಪಿ ಪ್ರೌಢಶಾಲೆ ಆದಿ ಉಡುಪಿ, 10.ಸರಕಾರಿ ಪದವಿ ಪೂರ್ವ ಕಾಲೇಜು ಬಸ್‌ನಿಲ್ದಾಣದ ಬಳಿ ಉಡುಪಿ.







