ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದಂದು ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡದೆ ಒಂದು ಸಾಲಿನ ಶುಭಾಶಯವನ್ನು ಪೋಸ್ಟ್ ಮಾಡಿದ್ದಾರೆ.
'ಹುಟ್ಟುಹಬ್ಬದ ಶುಭಾಶಯಗಳು, ಮೋದಿ ಜೀ' ಎಂದು ಕಾಂಗ್ರೆಸ್ ನಾಯಕ ಬರೆದಿದ್ದಾರೆ. ರಾಹುಲ್ ಗಾಂಧಿ ಅವರು ಆಗಾಗ್ಗೆ ತಮ್ಮ ದೈನಂದಿನ ಟ್ವೀಟ್‌ಗಳಲ್ಲಿ ಕೇಂದ್ರ ಸರಕಾರ ಹಾಗೂ ಆಡಳಿತಾರೂಢ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಾರೆ.
ಇನ್ನೊಬ್ಬ ಕಟು ಟೀಕಾಕಾರರಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಟ್ವೀಟ್ ಮೂಲಕ ಪ್ರಧಾನಿ ಮೋದಿಯವರಿಗೆ ಶುಭ ಹಾರೈಸಿದ್ದಾರೆ.
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಕೇಜ್ರಿವಾಲ್ ಅವರು ಪೋಸ್ಟ್ ಮಾಡಿದ್ದಾರೆ.
#HappyBdayModiji ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರಧಾನಿ ಮೋದಿಯವರ ಬೆಂಬಲಿಗರು ಹಾಗೂ ಟೀಕಾಕಾರರು ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ.
ಬಿಜೆಪಿ ಮೂರು ವಾರಗಳ ಕಾಲ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಆಚರಣೆಯನ್ನು ಆರಂಭಿಸಲಿದೆ. ಇದರಲ್ಲಿ ದೇಶದ ನಾಗರಿಕರಿಂದ 'ಧನ್ಯವಾದಗಳು' ಪೋಸ್ಟ್‌ಕಾರ್ಡ್‌ಗಳು, ವ್ಯಾಕ್ಸಿನೇಷನ್ ಅಭಿಯಾನಗಳು, ಸ್ವಚ್ಛತೆ ಹಾಗೂ ಪರಿಸರ ಅಭಿಯಾನಗಳು , ಸಮಾರಂಭಗಳು ಸೇರಿವೆ.
Happy birthday, Modi ji.
— Rahul Gandhi (@RahulGandhi) September 17, 2021