Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಪು: ಡಾ. ಇನ್ಶಾ ಹುದಾಗೆ ಯುಎಇ ಗೋಲ್ಡನ್...

ಕಾಪು: ಡಾ. ಇನ್ಶಾ ಹುದಾಗೆ ಯುಎಇ ಗೋಲ್ಡನ್ ವೀಸಾ ಸಮ್ಮಾನ

ವಾರ್ತಾಭಾರತಿವಾರ್ತಾಭಾರತಿ17 Sept 2021 8:56 PM IST
share
ಕಾಪು: ಡಾ. ಇನ್ಶಾ ಹುದಾಗೆ ಯುಎಇ ಗೋಲ್ಡನ್ ವೀಸಾ ಸಮ್ಮಾನ

ಉಡುಪಿ, ಸೆ.17: ಕಾಪು ಮೂಲದ ಆಯುರ್ವೇದ ತಜ್ಞ ವೈದ್ಯೆ ಡಾ. ಇನ್ಶಾ ಹುದಾ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಸರಕಾರದಿಂದ ‘ಗೋಲ್ಡನ್ ವೀಸಾ ಸಮ್ಮಾನ್’ ಪಡೆಯುವ ಮೂಲಕ ಕರಾವಳಿ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವನ್ನು ಒದಗಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೋಲ್ಡನ್ ವೀಸಾ ಸಮ್ಮಾನ ಪಡೆದ ಮೊತ್ತಮೊದಲ ಆಯುರ್ವೇದ ವೈದ್ಯೆ ಇವರಾಗಿದ್ದಾರೆ.

ಡಾ.ಇನ್ಶಾ ಹುದಾ ಉಡುಪಿ ಜಿಲ್ಲೆಯ ಕಾಪು ಮೂಲದವರು. ಅವರ ಹೆತ್ತವರಾದ ಪೀರ್ ಮುಹಮ್ಮದ್ ಹಾಗೂ ಗುಲ್ಶನ್ ಮುಹಮ್ಮದ್ ದಂಪತಿ ಮದ್ಯಮ ವರ್ಗದ ಕುಟುಂಬದಿಂದ ಬಂದವರು. ಡಾ.ಹುದಾ ಅವರು ತನ್ನೆಲ್ಲಾ ಯಶಸ್ಸು ಹಾಗೂ ಸಾಧನೆಗೆ ಹೆತ್ತವರು ಹಾಗೂ ನಿವೃತ್ತ ಅರಣ್ಯಾಧಿಕಾರಿಯಾಗಿದ್ದ ಅಜ್ಜ ಹಾಜಿ ಅಬ್ದುಲ್ಲ ಖಾದರ್ ಅವರೇ ಕಾರಣ ಎಂದು ಹೇಳುತ್ತಾರೆ.

‘ನನ್ನ ಹೆತ್ತವರು ನನ್ನ ಓದಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅತ್ಯುನ್ನತ ಗುರಿಯೊಂದಿಗೆ, ಶ್ರಮವಹಿಸಿ ಓದುವಂತೆ ಅವರು ನನಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುತಿದ್ದರು. ನನ್ನ ದಿವಂಗತ ಅಜ್ಜ ನನ್ನೆಲ್ಲಾ ಭವಿಷ್ಯದ ಕನಸುಗಳಲ್ಲಿ ನಂಬಿಕೆ ಇರಿಸಿ ಪ್ರೋತ್ಸಾಹಿಸುತಿದ್ದರು. ಅದೇ ರೀತಿ ತನ್ನೆಲ್ಲಾ ಶಿಕ್ಷಕರು, ಮಾರ್ಗದರ್ಶಕರನ್ನು ವಿಶೇಷ ಕೃತಜ್ಞತೆಗಳೊಂದಿಗೆ ಸ್ಮರಿಸುತ್ತೇನೆ.’ ಎಂದರು.

ಉಡುಪಿ ವಿದ್ಯಾನಿಕೇತನದಲ್ಲಿ ತನ್ನ ಶಾಲಾ ದಿನಗಳನ್ನು ಪೂರ್ಣಗೊಳಿಸಿದ ಅವರು ಮುಂದೆ ಕುತ್ಪಾಡಿಯ ಎಸ್‌ಡಿಎಂ ಕಾಲೇಜಿನಲ್ಲಿ ಮೆರಿಟ್ ಶೀಟ್‌ನೊಂದಿಗೆ ಆಯುರ್ವೇದ ಸೀಟನ್ನು ಪಡೆದು 2011ರಲ್ಲಿ ಬಿಎಎಂಎಸ್ ಪದವಿ ಪಡೆದರು. ಬಳಿಕ ವಿವಾಹಬಂಧನಕ್ಕೊಳಗಾಗಿ ಒಂದು ಮಗುವಿನ ತಾಯಿ ಯಾದ ಬಳಿಕವೂ ತನ್ನ ಉನ್ನತ ಶಿಕ್ಷಣವನ್ನು ಮುಂದುವರಿಸಿದ ಡಾ.ಹುದಾ, 2015ರಲ್ಲಿ ಮಣಿಪಾಲ ವಿವಿ ಮೂಲಕ ಕೆಎಂಸಿಯಲ್ಲಿ ಪಂಚಕರ್ಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

2017ರಲ್ಲಿ ಯುಎಇಯಲ್ಲಿ ಅಲ್ಲಿನ ಆರೋಗ್ಯ ಸಚಿವಾಲಯ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾ.ಹುದಾ, ಆ ದೇಶದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಪರವಾನಿಗೆಯನ್ನು ಪಡೆದು. ಆಯುರ್ವೇದ ಚಿಕಿತ್ಸಾ ಪದ್ಧತೆ ಮೂಲಕ ಅವರು ಚರ್ಮ ರೋಗ, ಬೊಜ್ಜುಗೆ ಚಿಕಿತ್ಸೆ, ಸಂಧಿವಾತ, ಸ್ವಯಂನಿರೋಧಕ ಕಾಯಿಲೆ, ಆತಂಕ, ಖಿನ್ನತೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಅಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದರು. ಅಲ್ಲದೇ ಯೋಗದ ಮೂಲಕ ಬೆನ್ನುಹುರಿ ಸಮಸ್ಯೆಗೆ ನೀಡುತಿದ್ದ ಚಿಕಿತ್ಸೆ ರೋಗಿಗಳಿಂದ ಭಾರೀ ಮೆಚ್ಚುಗೆ ಪಡೆದಿತ್ತು.

ಆಯುಷ್ ವಿಶ್ವ ಸಮ್ಮೇಳನದಲ್ಲಿ ಜೀವನಶೈಲಿ ರೋಗಗಳ ಕುರಿತಂತೆ ಡಾ. ಹುದಾ ಮಂಡಿಸಿದ ಪ್ರಬಂಧ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯಕ್ಕೆ ಡಾ. ಹುದಾ ಅವರು ಯುಎಇಯ ಎಮಿರೆಟ್ಸ್ ಆಯುರ್ವೇದಿಕ್ ಗ್ರಾಜುವೇಟ್ ಅಸೋಸಿಯೇಷನ್ (ಇಎಜಿಎ)ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿ ಸುತಿದ್ದಾರೆ.ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತಿದ್ದಾರೆ. ವಿದೇಶಗಳ ಹಲವು ಕ್ಲಿನಿಕ್‌ಗಳಿಗೆ ಡಾ.ಇನ್ಶಾ ಹುದಾ ಆನ್‌ಲೈನ್ ಸಲಹೆಗಾರರಾಗಿಯೂ ಕಾರ್ಯಾಚರಿಸುತಿದ್ದಾರೆ.

ಆಯುರ್ವೇದದಲ್ಲಿ ಇನ್ನಷ್ಟು ತಜ್ಞತೆಯನ್ನು ಪಡೆಯಲು ತಮ್ಮ ಓದನ್ನು ಮುಂದುವರಿಸಿ ವಿಜ್ಞಾನ ಕ್ಷೇತ್ರದಲ್ಲಿ ಪಿಎಚ್‌ಡಿಯನ್ನು ಪಡೆಯುವ ಗುರಿಯನ್ನೂ ಡಾ.ಹುದಾ ಹೊಂದಿದ್ದಾರೆ.

ಭರತನಾಟ್ಯ, ಯಕ್ಷಗಾನ ಪ್ರವೀಣೆ:  ಡಾ.ಹುದಾ ಕೇವಲ ಆಯುರ್ವೇದ ಕ್ಷೇತ್ರದಲ್ಲಿ ಮಾತ್ರ ಪರಿಣಿತೆ, ತಜ್ಞೆಯಲ್ಲ. ಆಕೆ ಉತ್ತಮ ಭರತನಾಟ್ಯ ನೃತ್ಯಗಾತಿ ಹಾಗೂ ಯಕ್ಷಗಾನ ಕಲಾವಿದೆಯೂ ಆಗಿದ್ದಾರೆ. ಇದರೊಂದಿಗೆ ಆಕೆ ಕರಾಟೆಯಲ್ಲಿ ಬ್ಲಾಕ್ ಬೆಲ್ಡ್‌ನ್ನು ಪಡೆದಿದ್ದಾರೆ. ತನ್ನ ಹಿಂದಿ ಕವನಕ್ಕಾಗಿ ರಾಷ್ಟ್ರಮಟ್ಟದ ಬಹುಮಾನವನ್ನು ಪಡೆದಿರುವ ಡಾ.ಹುದಾ, ಗೈಡ್ ಆಗಿ ರಾಜ್ಯಮಟ್ಟದ ಪುರಸ್ಕಾರವನ್ನು ಸಂಪಾದಿಸಿದ್ದಾರೆ. ತನ್ನ ಈ ಎಲ್ಲಾ ಹವ್ಯಾಸಗಳನ್ನು ಮುಂದುವರಿಸಿ, ಇವುಗಳಲ್ಲಿ ಇನ್ನಷ್ಟು ತರಬೇತಿ ಪಡೆಯುವ ಬಯಕೆಯನ್ನೂ ಆಕೆ ಹೊಂದಿದ್ದಾರೆ.

‘ಒಂದು ವೇಳೆ ನಾನು ವೈದ್ಯೆಯಾಗದೇ ಇದ್ದಿದ್ದರೆ... ಇತಿಹಾಸದಲ್ಲಿ ನನಗಿರುವ ಅತಿಯಾದ ಆಸಕ್ತಿಯಿಂದಾಗಿ ಇತಿಹಾಸಜ್ಞೆಯಾಗಿರುತ್ತಿದ್ದೆ.. ನನಗೆ ಮಾಡಲು ಬೇರೆ ಏನೂ ಕೆಲಸಗಳಿಲ್ಲದಿದ್ದಾಗ ನಾನು ಇತಿಹಾಸ ಪುಸ್ತಕ ಓದುತ್ತಿರುವುದನ್ನೋ, ಇತಿಹಾಸದ ಕಾರ್ಯಕ್ರಮಗಳನ್ನು ನೋಡುತ್ತಿರುವುದನ್ನೋ ನೀವು ನೋಡಬಹುದು.’ ಎಂದು ಆಯುರ್ವೇದ ತಜ್ಞೆ ನಗುತ್ತಾ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X