ನಟ ಸೋನು ಸೂದ್ 20 ಕೋಟಿ ರೂ.ಗೂ ಅಧಿಕ ತೆರಿಗೆ ವಂಚಿಸಿದ್ದಾರೆ: ಆದಾಯ ತೆರಿಗೆ ಇಲಾಖೆ

photo: instagram
ಹೊಸದಿಲ್ಲಿ: ನಟ ಸೋನು ಸೂದ್ ಅವರು 20 ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಇಂದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಐಟಿ ಇಲಾಖೆಯ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸೂದ್ ಅವರ ಮುಂಬೈ ನಿವಾಸಕ್ಕೆ ಶೋಧಕ್ಕಾಗಿ ಭೇಟಿ ನೀಡಿದ ಬಳಿಕ ಈ ಹೇಳಿಕೆ ನೀಡಿದೆ ಎಂದು NDTV ವರದಿ ಮಾಡಿದೆ.
48 ವಯಸ್ಸಿನ ಸೂದ್ ಇತ್ತೀಚೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು.
Next Story