ಕ್ಯಾಪ್ಟನ್ ಅಮರಿಂದರ್ ರಿಂದ ರಾಜೀನಾಮೆ ಕೇಳಿದ ಕಾಂಗ್ರೆಸ್ ಹೈಕಮಾಂಡ್: ವರದಿ
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು
ಹೊಸದಿಲ್ಲಿ: ಶನಿವಾರ ಸಂಜೆ ಪಂಜಾಬ್‌ನಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯ ಮೊದಲು ಕಾಂಗ್ರೆಸ್‌ನ ಹೈಕಮಾಂಡ್ ಹೊಸ ನಾಯಕನ ಆಯ್ಕೆಗೆ ಅನುಕೂಲವಾಗುವಂತೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಕೇಳಿಕೊಂಡಿದೆ ಎಂದು ತಿಳಿದುಬಂದಿರುವುದಾಗಿ The Indian Express ವರದಿ ಮಾಡಿದೆ.
ಇದರಿಂದ ಗೊಂದಲಕ್ಕೊಳಗಾಗಿರುವ ಸಿಎಂ ಅಮರಿಂದರ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಮಾತನಾಡಿದ್ದಾರೆ. ನನಗೆ ಪಕ್ಷದಲ್ಲಿ ಅವಮಾನ ಮಾಡಲಾಗುತ್ತಿದೆ. ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಮಾಜಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಒಂದು ಕಾಲದಲ್ಲಿ ಅಮರಿಂದರ್ ಅವರಿಗೆ ಆಪ್ತರಾಗಿದ್ದ ಸುನೀಲ್ ಜಾಖರ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story