‘ಪಕ್ಷದ ಹಿತಾಸಕ್ತಿ ಕಾಪಾಡುತ್ತೀರೆಂಬ ವಿಶ್ವಾಸವಿದೆ’: ಅಮರಿಂದರ್ ಸಿಂಗ್ ಉದ್ದೇಶಿಸಿ ಅಶೋಕ್ ಗೆಹ್ಲೋಟ್ ಟ್ವೀಟ್

ಹೊಸದಿಲ್ಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಕಾಂಗ್ರೆಸ್ ಸಹೋದ್ಯೋಗಿ ಹಾಗೂ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ "ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಹಿತಾಸಕ್ತಿ ಉಳಿಸಿಕೊಂಡು ಕೆಲಸ ಮುಂದುವರಿಸುವಂತೆ" ವಿನಂತಿಸಿದ್ದಾರೆ.
ಪಂಜಾಬ್‌ನಲ್ಲಿನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, ಪಕ್ಷದ ಹೈಕಮಾಂಡ್ ಕೇವಲ ಶಾಸಕರು ಮತ್ತು ಸಾರ್ವಜನಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ನಾಯಕರು ಪಕ್ಷದ ಹಿತದೃಷ್ಟಿಯಿಂದ ಯೋಚಿಸಬೇಕು ಎಂದು ಹೇಳಿದರು.
"ಕ್ಯಾಪ್ಟನ್ ಸಾಹೇಬ್ ಅವರು ಪಕ್ಷದ ಗೌರವಾನ್ವಿತ ನಾಯಕರಾಗಿದ್ದಾರೆ ಹಾಗೂ ಪಕ್ಷದ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಅವರು ಕೆಲಸ ಮಾಡುವುದನ್ನು ನಾನು ಆಶಿಸುತ್ತೇನೆ" ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
Next Story





