‘ಈವೆಂಟ್ ಮುಗಿದಿದೆ’: ಪ್ರಧಾನಿ ಮೋದಿ ಅವರ ಜನ್ಮದಿನದಂದು ಲಸಿಕೆ ದಾಖಲೆ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ ದಾಖಲೆಯ ಕೋವಿಡ್ -19 ಲಸಿಕೆ ನೀಡಿಕೆ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಈವೆಂಟ್’ ಈಗ ಮುಗಿದಿದೆ'ಎಂದು ಹೇಳಿದ್ದಾರೆ.
ಕಳೆದ 10 ದಿನಗಳ ಅವಧಿಯಲ್ಲಿ ಕೋವಿಡ್ ಲಸಿಕೆ ನೀಡಿರುವುದಕ್ಕೆ ಸಂಬಂಧಿಸಿ ಕೋ-ವಿನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಗ್ರಾಫ್ ವೊಂದನ್ನು ರಾಹುಲ್ ಹಂಚಿಕೊಂಡಿದ್ದಾರೆ. 'ವ್ಯಾಕ್ಸಿನೇಷನ್' ಹ್ಯಾಶ್‌ಟ್ಯಾಗ್ ಬಳಸಿ, " ಈವೆಂಟ್ ಓವರ್" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ದಾಖಲೆ ಪ್ರಮಾಣದಲ್ಲಿ ಲಸಿಕೆ ನೀಡಿದ ನಂತರ ಲಸಿಕೆ ನೀಡುವಲ್ಲಿ ಮತ್ತೆ ಕುಸಿತ ಕಂಡುಬಂದಿದೆ ಎಂದು ರಾಹುಲ್ ರವಿವಾರ ಟ್ವೀಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ ದೇಶದ 2.5 ಕೋಟಿ ಜನರಿಗೆ ಲಸಿಕೆ ಹಾಕಲಾಗಿತ್ತು.
"ಇಂತಹ ದಾಖಲೆ ಲಸಿಕೆಗಳು ದೇಶದಲ್ಲಿ ಹೆಚ್ಚು ನಡೆಯಲಿ ಎಂದು ಆಶಿಸುವೆ. 2.1 ಕೋಟಿ ಲಸಿಕೆಗಳನ್ನು ಇನ್ನೂ ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇವೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ "ಎಂದು ರಾಹುಲ್ ಗಾಂಧಿ ಶನಿವಾರ ಟ್ವಿಟರ್‌ನಲ್ಲಿ ತಿಳಿಸಿದ್ದರು.