ಐಪಿಎಲ್: ಮುಂಬೈಯನ್ನು ಮಣಿಸಿದ ಚೆನ್ನೈ

photo: twitter.com/ESPNcricinfo
ದುಬೈ, ಸೆ.19: ಶಿಸ್ತುಬದ್ದ ಬೌಲಿಂಗ್ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 30ನೇ ಪಂದ್ಯವನ್ನು 20 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 157 ರನ್ ಗುರಿ ಬೆನ್ನಟ್ಟಿದ್ದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಡಿದ ಮುಂಬೈ ಪರವಾಗಿ ಸೌರಭ್ ತಿವಾರಿ(ಔಟಾಗದೆ 50) ಸರ್ವಾಧಿಕ ಸ್ಕೋರ್ ಗಳಿಸಿದರು.
ಚೆನ್ನೈ ಪರವಾಗಿ ಡ್ವೇಯ್ನ್ ಬ್ರಾವೊ(3-25) ಯಶಸ್ವಿ ಬೌಲರ್ ಎನಿಸಿಕೊಂಡರು. ದೀಪಕ್ ಚಹಾರ್(2-19) ಎರಡು ವಿಕೆಟ್ ಪಡೆದರು.
Next Story