ಒಳನುಸುಳುವಿಕೆ ಪ್ರಯತ್ನ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ನಿರ್ಬಂಧ

Image Source : PTI
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶಸ್ತ್ರಾಸ್ತ್ರ ಹೊಂದಿರುವ ಉಗ್ರರ ಒಳನುಸುಳುವಿಕೆ ಯತ್ನದ ನಂತರ ಅಂತರ್ಜಾಲ ಹಾಗೂ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಕಳೆದ 30 ಗಂಟೆಗಳಿಂದ ಪ್ರತಿ-ಒಳನುಸುಳುವಿಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆ ಹೇಳಿದೆ.
ಸೇನೆಯನ್ನು ಕರೆಯಲಾಗಿದೆ ಹಾಗೂ ದೊಡ್ಡ ಪ್ರದೇಶವನ್ನು ಸುತ್ತುವರಿಯಲಾಗಿದೆ. ಸೇನೆಯ ಪ್ರಕಾರ ಇದು ಈ ವರ್ಷದ ಎರಡನೇ ಒಳನುಸುಳುವಿಕೆ ಪ್ರಯತ್ನವಾಗಿದೆ.
"ಈ ವರ್ಷ ಕದನ ವಿರಾಮ ಉಲ್ಲಂಘನೆ ಆಗಿಲ್ಲ. ನಾವು ಯಾವುದೇ ಕದನ ವಿರಾಮ ಉಲ್ಲಂಘನೆಗೆ ಸಿದ್ಧರಿದ್ದೇವೆ. ಆದರೆ ಗಡಿಯಿಂದ ಯಾವುದೇ ಪ್ರಚೋದನೆ ನೀಡಲಾಗಿಲ್ಲ" ಎಂದು 15 ಕಾರ್ಪ್ಗಳ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಹೇಳಿದರು.
Next Story