ಮಂಗಳೂರು : ಪ್ರೆಸಿಡೆನ್ಸಿ ಶಾಲೆ, ವಸತಿ ಕಾರ್ಯಕ್ರಮದ ಉದ್ಘಾಟಣೆ
ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ

ಮಂಗಳೂರು : ಪ್ರೆಸಿಡೆನ್ಸಿ ಸಿಬಿಎಸ್ಇ ಶಾಲೆ ಮತ್ತು ಪಿಯು ಕಾಲೇಜು ಕೆಲರೈ, ಮಂಗಳೂರು ಇಲ್ಲಿ ವಸತಿ ಕಾರ್ಯಕ್ರಮದ ಉದ್ಘಾಟಣೆ ಮತ್ತು ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ಸೆ.20 ರಂದು ಬೆಳಗ್ಗೆ 9 ಗಂಟೆಗೆ ಪ್ರೆಸಿಡೆನ್ಸಿ ಕ್ಯಾಂಪಸ್ ವಂಗಳೂರು ವಠಾರದಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ನಿಸಾರ್ ಅಹ್ಮದ್ ಸಮಾರಂಭದ ಮುಖ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವ ಅತಿಥಿಗಳಾಗಿ ಪಿಜಿಐ ಅಧ್ಯಕ್ಷೆ ಕೌಸರ್ ಅಹ್ಮದ್, ಪಿಜಿಐ ನಿರ್ದೇಶಕರಾದ ನಫಿಸಾ ಅಹ್ಮದ್ , ಪಿಜಿಐ ಉಪಾಧ್ಯಕ್ಷರಾದ ಸುಹೈಲ್ ಅಹ್ಮದ್ ಹಾಗೂ ಸಲ್ಮಾನ್ ಅಹ್ಮದ್, ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲರಾದ ಶೈಲಾ ಸಲ್ಧಾನಾ, ಶಾಲೆಯ ಸಮಿತಿಯ ಸದಸ್ಯ ಜಾವೇದ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರೆಸಿಡೆನ್ಸಿ ಸಮೂಹ ಸಂಸ್ಥೆಯು ಒಟ್ಟು 8 ಶಾಲೆಗಳು, 4 ಕಾಲೇಜುಗಳು ಮತ್ತು ಒಂದು ವಿಶ್ವವಿದ್ಯಾನಿಲಯವನ್ನೊಳಗೊಂಡಿದೆ. 2021ರಲ್ಲಿ ಪ್ರೆಸಿಡೆನ್ಸಿಯು ಅತ್ಯುತ್ತಮ ಶಾಲೆ ಹಾಗೂ ಕಾಲೇಜು ಎಂಬ ಅಪೇಕ್ಷಿತ ಪ್ರಶಸ್ತಿಯನ್ನು ಸಹ ತನ್ನ ಮುಡಿಗೇರಿಸಿಕೊಂಡಿದೆ. 1976ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಪ್ರೆಸಿಡೆನ್ಸಿ ಸಂಸ್ಥೆಯು, 2001ರಲ್ಲಿ ಅದರ ಇನ್ನೊಂದು ಶಾಖೆಯು ಮಂಗಳೂರಿನಲ್ಲಿ ಪ್ರಾರಂಭಗೊಂಡಿತು. ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯು ಪೂರ್ವ ಪ್ರಾಥಮಿಕ ತರಗತಿಯಿಂದ ಹಾಗೂ 12ನೇ ತರಗತಿಯವರೆಗೆ ಇದ್ದು , ಪಿಯುಸಿಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳನ್ನು ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಜೆಇಇ ಮೈನ್ , ನೀಟ್ ಹಾಗೂ ಇಂಟಿಗ್ರೇಟ್ಡ್ ವಿಷಯಗಳ ಕುರಿತು ತರಬೇತಿಗಳನ್ನು ಕೊಡಲಾಗುತ್ತಿದೆ.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ವಿವಿಧ ವಿನೋದಾವಳಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಸಲ್ಧಾನಾರವರು ಸ್ವಾಗತಿಸಿದರು. ಶಿಕ್ಷಕಿ ರೋಜ್ನಿಯಾ ನಿರೂಪಿಸಿದರು. ಶಿಕ್ಷಕಿ ಸರಿತಾ ಶೆಟ್ಟಿ ವಂದಿಸಿದರು.








